Friday, November 20, 2026

ಪ್ರಾಯೋಗಿಕ ಆವೃತ್ತಿ

ಕದಲೂರು ಉದಯ್ ಪಾಲಾದ ‘ಕೈ’ ಟಿಕೆಟ್

ಮದ್ದೂರು ‘ಕೈ’ ಟಿಕೆಟ್ ಗಾಗಿ ನಡೆಯುತ್ತಿದ್ದ ಕದನದಲ್ಲಿ ಕೊನೆಗೂ ಕದಲೂರು ಉದಯ್ ಗೆಲುವು ಸಾಧಿಸಿದ್ದಾರೆ.

ಎಸ್.ಎಂ.ಕೃಷ್ಣ ಕುಟುಂಬದ ಕುಡಿ ಗುರುಚರಣ್ ಹಾಗೂ ಕದಲೂರು ಉದಯ್ ನಡುವೆ ಕಾಂಗ್ರೆಸ್ ಟಿಕೆಟ್ ಪಡೆಯಲು ಜಿದ್ದಾಜಿದ್ದಿನ ಕಾಳಗ ಏರ್ಪಟ್ಟಿತ್ತು.ಅಂತಿಮವಾಗಿ ಕಾಂಗ್ರೆಸ್ ಟಿಕೆಟ್ ಉದಯ್ ಪಾಲಾಗಿದೆ.

ತನ್ನ ರಾಜಕೀಯ ಗುರು ಎಸ್.ಎಂ.ಕೃಷ್ಣ ಅವರ ಕುಟುಂಬದ ಕುಡಿ ಗುರುಚರಣ್ ಗೆ ಕೆಪಿಸಿಸಿ ಅಧ್ಯಕ್ಷnudikarnataka.com ಡಿ.ಕೆ‌.ಶಿವಕುಮಾರ್ ಟಿಕೆಟ್ ಕೊಡುತ್ತಾರೆಂಬ ನಿರೀಕ್ಷೆ ಕಡೆಗೂ ಹುಸಿಯಾದಂತಾಗಿದೆ.ಕೊನೇ ಕ್ಷಣದವರೆಗೂ ಮದ್ದೂರು ಕಾಂಗ್ರೆಸ್ ಟಿಕೆಟ್ ತನಗೆ ಸಿಗುತ್ತದೆ ಎಂದು ಕಾಯುತ್ತಿದ್ದ ಗುರುಚರಣ್ ಅವರಿಗೆ ನಿರಾಸೆಯಾದಂತಾಗಿದೆ.

ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿ ಅವರೆಲ್ಲಾ ಈಗಾಗಲೇ ಭಿನ್ನಮತ, ಬಂಡಾಯ ಶಮನ ಎಂದೆಲ್ಲಾ ಓಡಾಡುತ್ತಿದ್ದರೆ, ಮದ್ದೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಕದಲೂರು ಉದಯ್ ಹಾಗೂ ಗುರುಚರಣ್ ಶತಪ್ರಯತ್ನ ನಡೆಸಿದ್ದರು.ಕಡೆಗೆ ಕಾಂಗ್ರೆಸ್ ಟಿಕೆಟ್ ಕದಲೂರು ಉದಯ್ ಅವರಿಗೆ ನೀಡಲಾಗಿದ್ದು,ಗುರುಚರಣ್ ಏನು ಮಾಡುವರೋ ಎಂಬ ಕುತೂಹಲ ಮೂಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ