Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಅವರ ಆಸ್ತಿ ವಿವರ

ಒಂದು ಜಾನ್ ಧೀರೆ ಟ್ರಾಕ್ಟರ್, ಬಿಎಂಡಬ್ಲು, ಇನೋವಾ ಕ್ರಿಸ್ಟಾ ಹಾಗೂ ಇನೋವಾ ಕಾರುಗಳನ್ನು ಹೊಂದಿರುವ ಮೇಲುಕೋಟೆ ಕ್ಷೇತ್ರದ ಸಿ.ಎಸ್.ಪುಟ್ಟರಾಜು ಅವರು ತಮ್ಮ ಆಸ್ತಿ ಮೌಲ್ಯದಷ್ಟೇ ಸಾಲವಿದೆ ಎಂದು ಘೋಷಿಸಿಕೊಂಡಿದ್ದಾರೆ.

ಕೈಯಲ್ಲಿ 7.50ಲಕ್ಷ ರೂ. ನಗದು ಹೊಂದಿರುವ ಪುಟ್ಟರಾಜು ಅವರ ಬಳಿ ಕಾರುಗಳು, 2 ಕೆ.ಜಿ. ಬೆಳ್ಳಿ ಸೇರಿದಂತೆ 2.72ಕೋಟಿ ರೂ. ಮೌಲ್ಯದ ಚರಾಸ್ತಿ, 7 ಎಕರೆ 12 ಗುಂಟೆ ಕೃಷಿ ಭೂಮಿ, ಹುಟ್ಟೂರು ಚಿನಕುರಳಿಯಲ್ಲಿ ವಾಣಿಜ್ಯ ಕಟ್ಟಡಗಳು, ಚಿನಕುರಳಿ, ಪಾಂಡವಪುರ, ಮೈಸೂರು, ಬೆಂಗಳೂರಿನಲ್ಲಿ ಮನೆಗಳು ಸೇರಿದಂತೆ 23.85ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ.

ಕುಪೇಂದ್ರ ರೆಡ್ಡಿ ಅವರ ಬಳಿ 1 ಕೋಟಿ ರೂ., ಎಸ್‌ಟಿಜಿ ಟ್ರಸ್ಟ್ ನಿಂದ 3.31ಕೋಟಿ ರೂ. ಹಾಗೂ ವಿವಿಧ ಬ್ಯಾಂಕುಗಳಿದ ಸೇರಿದಂತೆ 23.65 ಕೋಟಿ ರೂ. ಸಾಲ ಮಾಡಿರುವುದಾಗಿ ಪುಟ್ಟರಾಜು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆಂಬ ಆರೋಪದ ಮೇಲೆ ಇವರ ವಿರುದ್ಧ ಒಂದು ಪ್ರಕರಣ ದಾಖಲಾಗಿದ್ದು, ಇದು ಸಿಬಿಐ ವಿಚಾರಣೆಯಲ್ಲಿದೆ.

ಪುಟ್ಟರಾಜು ಅವರ ಪತ್ನಿ ನಾಗಮ್ಮ ಅವರ ಕೈಯಲ್ಲಿ 4 ಲಕ್ಷ ರೂ. ನಗದು, 1 ಕೆ.ಜಿ. ಚಿನ್ನ, 3 ಕಿಲೋ ಬೆಳ್ಳಿ ಸೇರಿದಂತೆ 55.19 ಲಕ್ಷ ರೂ. ಮೌಲ್ಯದ ಚರಾಸ್ತಿ,1.18 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದ್ದು, 17.30 ಲಕ್ಷ ರೂ. ಸಾಲ ತೋರಿಸಿದ್ದಾರೆ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ