Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಅವರ ಆಸ್ತಿ ವಿವರ

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು 39.81 ಕೋಟಿ ರು. ಆಸ್ತಿಗೆ ಒಡೆಯರಾಗಿದ್ದಾರೆ.

ಅವರ ಬಳಿ 26. ಕೋಟಿ ರೂ. ಚರಾಸ್ತಿ ಮತ್ತು 13 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದೆ‌. ಮಂಜು ಬಳಿ 2.85ಕೋಟಿ ರೂ, ಪತ್ನಿ ಕೆ.ಎಂ.ರಮಾ ಬಳಿ 2.41 ಕೋಟಿ ರೂ. ತಂದೆ ತಿಮ್ಮೇಗೌಡ ಬಳಿ 1.47 ಲಕ್ಷ ತಾಯಿ ಜವರಮ್ಮ ಬಳಿ 1.45 ಲಕ್ಷ, ಮಗಳು ವರ್ಷ 6.38ಲಕ್ಷ ಹಾಗೂ ಮಗ ಸ್ಕಂದ ಬಳಿ 6.38 ಲಕ್ಷ ರೂ. ತಮ್ಮ ಹೆಚ್.ಟಿ.ಲೋಕೇಶ್ 3.08ಕೋಟಿ ರೂ., ನಾದಿನಿ ಹೆಚ್.ಬಿ.ಪದ್ಮ ಬಳಿ 36.15 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.

ಮಂಜು ಬಳಿ 7 ಟಿಪ್ಪರ್ ವಾಹನಗಳು, 1 ಟಾಟಾ ಇಂಡಿಗೋ ಕಾರು, ಟೊಯೋಟೋ ಇನ್ನೋವಾ ಕಾರು, ಟ್ರಾಕ್ಟರ್, ಎಲ್‌ ಅಂಡ್ ಟಿ ವ್ಹೀಲ್ ಲೋಡರ್ ವಾಹನಗಳಿವೆ. ತಮ್ಮ ಹೆಚ್.ಟಿ.ಲೋಕೇಶ್ ಬಳಿ ಹುಂಡೈ ಕ್ರೆಟಾ ಕಾರು, 6 ಟಿಪ್ಪರ್, 1 ಮಹೀಂದ್ರಾ ಜೀಪ್, 1 ಟಾಟಾ ಗೂಡ್ಸ್ ವಾಹನ, 1 ಮಹೀಂದ್ರಾ ಟ್ರಾಕ್ಟರ್, ಮಹೀಂದ್ರಾ ಬೊಲೆರೋ ಗೂಡ್ಸ್ ವಾಹನಗಳಿವೆ.

ಮಂಜು ಬಳಿ 5.50 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ, ಪತ್ನಿ ಬಳಿ 27.50ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನ, 2.04 ಲಕ್ಷ ರೂ. ಮೌಲ್ಯದ 3 ಕೆಜಿ ಬೆಳ್ಳಿ, ತಂದೆ, ತಾಯಿ, ಮಗ, ಮಗಳು ಬಳಿ ತಲಾ 25 ಗ್ರಾಂ ಚಿನ್ನವಿದೆ.

ತಮ್ಮ ಹೆಚ್.ಟಿ.ಲೋಕೇಶ್ ಬಳಿ 5.50 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನ, ನಾದಿನಿ ಬಳಿ 33 ಲಕ್ಷ ರು.ಮೌಲ್ಯದ 600 ಗ್ರಾಂ ಚಿನ್ನವಿದೆ. ಹೆಚ್.ಟಿ.ಮಂಜು ಬಳಿ 9.25ಕೋಟಿ ರೂ., ಪತ್ನಿ 1.25ಕೋಟಿ ರೂ.,ತಂದೆ 10 ಲಕ್ಷ ರೂ., ತಾಯಿ 20 ಲಕ್ಷ ರೂ., ತಮ್ಮ 2.20 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಇನ್ನು ವಿವಿಧ ಉದ್ದೇಶಗಳಿಗೆ ಹೆಚ್.ಟಿ.ಮಂಜು 3.45 ಕೋಟಿ ರೂ., ಪತ್ನಿ ಕೆ.ಎಂ.ರಮಾ 37ಲಕ್ಷ ರೂ., ತಂದೆ 1.20 ಲಕ್ಷ ರೂ, ತಾಯಿ 90 ಸಾವಿರ ರೂ., ತಮ್ಮ 93.89ಲಕ್ಷ ರೂ. ಸಾಲ ಪಡೆದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!