ನುಡಿ ಕರ್ನಾಟಕ.ಕಾಂ ಬ್ರೇಕಿಂಗ್ ಸುದ್ಧಿ……
ಅಂತೂ ಇಂತೂ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಕುತೂಹಲಕ್ಕೆ ಕೊನೆಗೆ ತೆರೆ ಬಿದ್ದಿದೆ. ತೀವ್ರ ಪೈಪೋಟಿಗೆ ಕಾರಣವಾಗಿದ್ದ ಜೆಡಿಎಸ್ ಟಿಕೆಟ್ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಅವರ ಪಾಲಾಗಿದೆ.
ನಿನ್ನೆಯವರೆಗೂ ಹೆಚ್.ಡಿ.ಕುಮಾರಸ್ವಾಮಿಯವರೇ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇದಕ್ಕೆ ಸ್ವತಃ ಕುಮಾರಸ್ವಾಮಿಯವರೇ ಪ್ರತಿಕ್ರಿಯಿಸಿ ನಾನು ಮಂಡ್ಯಕ್ಕೆ ಬರುವುದಿಲ್ಲ, ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡುತ್ತೇನೆಂದು ಹೇಳಿದ್ದರು.

ಮಂಡ್ಯ ಜೆಡಿಎಸ್ ಟಿಕೆಟ್ ಗಾಗಿ ಶಾಸಕ ಎಂ.ಶ್ರೀನಿವಾಸ್ ಅವರ ಅಳಿಯ ಹೆಚ್.ಎನ್.ಯೋಗೇಶ್, ಕೆ.ವಿ.ಶಂಕರಗೌಡ ಅವರ ಮೊಮ್ಮೊಗ ಕೆ.ಎಸ್.ವಿಜಯ್ ಆನಂದ್ ಅವರು ಪ್ರಬಲ ಆಕಾಂಕ್ಷಿಗಳಾಗಿದ್ದದರು. ಆದರೆ ಅಂತಿಮವಾಗಿ ಜೆಡಿಎಸ್ ಟಿಕೆಟ್ ರಾಮಚಂದ್ರು ಅವರ ಪಾಲಾಗಿದೆ. ರಾಮಚಂದ್ರು ಅವರು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರೊಂದಿಗೆ ಆಪ್ತ ಒಡನಾಟ ಹೊಂದಿದ್ದು, ಸದ್ಯಕ್ಕೆ ಅವರೇ ಮೇಲುಗೈ ಸಾಧಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಆಶೀರ್ವಾದ ಪಡೆದು, ಅವರ ಕೈನಿಂದಲೇ ಜೆಡಿಎಸ್ ಬಿ.ಫಾರಂ ಅನ್ನು ಬಿ.ಆರ್.ರಾಮಚಂದ್ರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ರಾಮಚಂದ್ರು ಅವರ ಆಪ್ತರು ಉಪಸ್ಥಿರಿದ್ದರು.
ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಂತಹ ಗೌರವಾನ್ವಿತ ವರಿಷ್ಠರಿಗೆ ಹಾಗೂ ಸಹಕರಿಸಿದ ಎಲ್ಲಾ ಕಾರ್ಯಕರ್ತ ಬಂಧುಗಳಿಗೆ ಹಾಗೂ ಹಿತೈಷಿಗಳಿಗೆ ಬಿ.ಆರ್.ರಾಮಚಂದ್ರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಾಳೆ ನಾಮಪತ್ರ ಸಲ್ಲಿಕೆ
ಬಿ.ಆರ್.ರಾಮಚಂದ್ರು ನಾಳೆ ಮಂಡ್ಯ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.




