Thursday, November 19, 2026

ಪ್ರಾಯೋಗಿಕ ಆವೃತ್ತಿ

11 ಬೈಕ್ ಗಳ ವಶ : ಮೂವರು ಆರೋಪಿಗಳ ಬಂಧನ

ಮಂಡ್ಯ, ಬೆಂಗಳೂರು, ರಾಮನಗರ ಹಾಗೂ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ವಿವಿಧ ಸ್ಥಳಗಳನ್ನು 11 ಬೈಕ್ ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಮಂಡ್ಯ ತಾಲ್ಲೂಕಿನ ಬಸರಾಳು ಪೊಲೀಸ್ ಠಾಣೆಯ ಪೋಲಿಸರು, ಮೂವರು ಆರೋಪಿಗಳಿಂದ 11 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಮದ್ದೂರು ತಾಲ್ಲೂಕಿನ ಮುಟ್ಟನಹಳ್ಳಿ ಗ್ರಾಮದ ಅಭಿಷೇಕ್ ಅಲಿಯಾಸ್ ಮಾಲ, ಈರಯ್ಯ ಅಲಿಯಾಸ್ ಪ್ರದೀಪ ಹಾಗೂ ಮನೋಜ್ ಗೌಡ ಎಂಬ ಬೈಕ್ ಕಳ್ಳರನ್ನು ಬಂಧಿಸಲಾಗಿದೆ.

ಘಟನೆ ವಿವರ 
ಕಳೆದ ಏ.1ರಂದು ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದ ನಾಡಕಚೇರಿ ಮುಂಭಾಗ ನಿಲ್ಲಿಸಿದ್ದ ಹೀರೋ ಸ್ಪ್ಲೈಂಡರ್ ಬೈಕ್ ಕಳ್ಳತನವಾಗಿರುವ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಪತ್ತೆ ಹಚ್ಚಲು ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ತಿಮ್ಮಯ್ಯ, ಡಿ.ಎಸ್.ಪಿ ಓಂ ಪ್ರಕಾಶ್ ರವರ ಮಾರ್ಗದರ್ಶನದಲ್ಲಿ, ಕೆರಗೋಡು ವೃತ್ತ ನಿರೀಕ್ಷಕ ರಘು.ಆರ್ ಅವರ ಉಸ್ತುವಾರಿಯಲ್ಲಿ, ಬಸರಾಳು ಪಿ.ಎಸ್. ಶೇಷಾದ್ರಿ ಕುಮಾರ್ ಮತ್ತು ರವಿಕುಮಾರ್ ಪಿಎಸ್‌ಐ ಶಿವಳ್ಳಿ ಪೊಲೀಸ್ ರವರ ನೇತೃತ್ವದಲ್ಲಿ ಬಸರಾಳು ಮತ್ತು ಶಿವಳ್ಳಿ ಪೊಲೀಸ್‌ ಠಾಣೆಗಳ ಸಿಬ್ಬಂದಿಗಳಾದ ಇಂದ್ರಕುಮಾರ್, ಮಧುಕುಮಾರ್, ಲೋಕೇಶ ಬನವಾಸಿ, ಮೋಹನ ನಾಯ್ಕ, ಪ್ರಸನ್ನ ಕುಮಾರ್, ಮಂಜು, ರವಿಕಿರಣ್, ಲೋಕೇಶ್ ಅವರನ್ನೊಳಗೊಂಡ ತಂಡವನ್ನು ರಚನೆ ಮಾಡಿ, ತನಿಖೆ ಕೈಗೊಳ್ಳಲಾಗಿತ್ತು. ಈ ತಂಡಕ್ಕೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಆರೋಪಿಗಳು ಬಸರಾಳು, ಕೆರಗೋಡು, ಶಿವಳ್ಳಿ, ಕೆಂಗೇರಿ, ರಾಮನಗರ, ಕಿರುಗಾವಲು, ಮಳವಳ್ಳಿ ಗ್ರಾಮಾಂತರ, ಕೊಳ್ಳೆಗಾಲ, ಚನ್ನಪಟ್ಟಣ ನಗರ, ಚನ್ನಪಟ್ಟಣ ಗ್ರಾಮಾಂತರ, ಚಿಕ್ಕಪೇಟೆ ಪೂರ್ವ ಪೊಲೀಸ್ ವ್ಯಾಪ್ತಿಯಲ್ಲಿ 11 ಬೈಕ್ ಗಳನ್ನು ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ. ಇವುಗಳ ಒಟ್ಟು ಮೌಲ್ಯ 5.50 ಲಕ್ಷ ರೂ. ಅಂದಾಜಿಸಲಾಗಿದೆ. ಬಸರಾಳು ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಶ್ಲಾಘಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ