Saturday, November 21, 2026

ಪ್ರಾಯೋಗಿಕ ಆವೃತ್ತಿ

ದ್ವಿತೀಯ ಪಿಯುಸಿ | ಮಂಡ್ಯದ ಪ್ರಚಿತ ರಾಜ್ಯಕ್ಕೆ 3ನೇ ರ್‍ಯಾಂಕ್

ಕರ್ನಾಟಕ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಮಂಡ್ಯದ  ಪ್ರಚಿತ ಎಂ. ಕರ್ನಾಟಕ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಪಡೆದಿದ್ದಾರೆ.

ಮಂಡ್ಯ ನಗರದ ಕಾವೇರಿ ನಗರದಲ್ಲಿ ವಾಸವಿರುವ ಶಿಕ್ಷಕ ದಂಪತಿಗಳಾದ ಜ್ಯೋತಿ ಎಸ್.ಆರ್. ಮತ್ತು ಮಲ್ಲೇಶ್ ಎಂ. ಎಂ. ಅವರ ಪುತ್ರಿಯಾಗಿರುವ ಪ್ರಚಿತ , ಮೂಡುಬಿದರೆ ಆಳ್ವಾಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.

ಇವರು ಗಣಿತ, ಜೀವಶಾಸ್ತ್ರ ಮತ್ತು ಸಂಸ್ಕೃತದಲ್ಲಿ ತಲಾ 100 ಅಂಕಗಳು, ಭೌತಶಾಸ್ತ್ರದಲ್ಲಿ 99 ರಸಾಯನಶಾಸ್ತ್ರದಲ್ಲಿ 98, ಇಂಗ್ಲಿಷ್ ನಲ್ಲಿ 97 ಅಂಕ ಪಡೆದು ಒಟ್ಟು 594 ಅಂಕ ಪಡೆದು ರಾಜ್ಯಕ್ಕೆ ತೃತೀಯ ರ್‍ಯಾಂಕ್  ಗಳಿಸಿದ್ದಾರೆ.

ಇವರ ತಂದೆ ಮಲ್ಲೇಶ್ ಅವರು ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದವರಾಗಿದ್ದು, ಬಾಬುರಾಯನ ಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿದ್ದಾರೆ. ತಾಯಿ ಜ್ಯೋತಿಯವರು ದೊಡ್ಡಗರುಡನಳ್ಳಿಯ  ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್ ಗಳಿಸಿ ಮಂಡ್ಯ ಜಿಲ್ಲೆಗೆ ಕೀರ್ತಿ ತಂದ ಪ್ರಚಿತ ಅವರನ್ನು ಮೈಷುಗರ್ ಪೌಢಶಾಲೆ  ನಿವೃತ್ತ ಮುಖ್ಯೋಪಾಧ್ಯಾಯ  ಟಿ.ರಮೇಶ್ ರವರು ಪ್ರಶಂಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ