Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಜಿಲ್ಲಾದ್ಯಂತ ₹ 3 ಕೋಟಿ ಮೌಲ್ಯದ ನಗದು – ವಸ್ತುಗಳ ವಶ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾದ್ಯಂತ ಏ.29 ರಿಂದ ಮೇ.22023ರವರೆಗೆ ವಶಪಡಿಸಿಕೊಳ್ಳಲಾದ ನಗದು ಹಾಗೂ ಇತರೆ ಪದಾರ್ಥಗಳು ಸೇರಿ ಒಟ್ಟಾರೆ ₹3,05,12,007ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಳೆಯಿಂದ ಅಂಚೆ ಮತದಾನ
80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನ ಮತದಾರರಿಗೆ ಮನೆ ಮನೆಗೆ ತೆರಳಿ ಮತದಾನ ಮಾಡಿಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೆಕ್ಟರ್ ವಾರು ತಂಡಗಳನ್ನು ರಚಿಸಿ, ಮೇ 3,4,5 ರಂದು ಮತದಾನ ಪ್ರಕ್ರಿಯೆಯನ್ನು ಕೈಗೊಳ್ಳಲು ಮತದಾನ ಸಿಬ್ಬಂದಿ ಹಾಗೂ ಮೈಕ್ರೋ ಅಬ್ಸರ್ ವರ್ ಗಳನ್ನು ನೇಮಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 8೦ ವರ್ಷ ಮೇಲ್ಪಟ್ಟ 37,439 ಮತದಾರರು ಮನೆಯಲ್ಲಿ ಮತಚಲಾಯಿಸಲು ಮತಪತ್ರ ಕೋರಿದ್ದಾರೆ, ಜಿಲ್ಲೆಯಲ್ಲಿ 23,068 ದಿವ್ಯಾಂಗ ಮತದಾರರು ಇದ್ದು, ಈ ಪೈಕಿ 2,630 ಮತದಾರರು ಮನೆಯಲ್ಲಿ ಮತ ಚಲಾಯಿಸಲು ಮತಪತ್ರ ಕೋರಿದ್ದಾರೆಂದು ತಿಳಿಸಿದರು.

ನಿರ್ಬಂಧಕಾಜ್ಞೆ
ಮೇ 8ರ ಸಂಜೆ 5 ಗಂಟೆಯಿಂದ ಮೇ.11ರ ಬೆಳಿಗ್ಗೆ 10 ಗಂಟೆಯ ವರೆಗೆ ಹಾಗೂ ಮೇ.13 ರ ಮತ ಎಣಿಕೆ ದಿನದಂದು ಬೆಳಿಗ್ಗೆ 6 ಗಂಟೆಯಿಂದ ಮೇ.14ರ ಬೆಳಿಗ್ಗೆ 10ಗಂಟೆಯ ವರೆಗೆ ಮಂಡ್ಯ ಜಿಲ್ಲೆಯಲ್ಲಿ ಬರುವ ಎಲ್ಲಾ ತರಹದ ಮದ್ಯದ ಅಂಗಡಿ, ರೆಸ್ಟೋರೆಂಟ್ ಹಾಗೂ ಕ್ಲಬ್ ಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಮೇ.10ರಂದು ನಡೆಯುವ ಎಲ್ಲಾ ರೀತಿಯ ಸಂತೆ, ಜಾತ್ರೆ, ಎಲ್ಲಾ ರೀತಿಯ ಉತ್ಸವವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ