Saturday, November 21, 2026

ಪ್ರಾಯೋಗಿಕ ಆವೃತ್ತಿ

”ಖರ್ಗೆ ಅವರ ಒಂದು ಹನಿ ರಕ್ತ ನೆಲಕ್ಕೆ ಚೆಲ್ಲಿದ್ದೇ ಆದರೆ ಬಿಜೆಪಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ” : ಕಾಂಗ್ರೆಸ್ ಎಚ್ಚರಿಕೆ

ದೇಶಕ್ಕಾಗಿ ಕಾಂಗ್ರೆಸ್ ನಾಯಕರು ಬಲಿದಾನಗೈದಿದ್ದಾರೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರಂತಹ ನಮ್ಮ ಅತ್ಯಮೂಲ್ಯ ನಾಯಕರನ್ನು ಕಳೆದುಕೊಂಡಿದ್ದೇವೆ. ಅಪ್ಪಿ ತಪ್ಪಿಯೂ ಮಲ್ಲಿಕಾರ್ಜುನ ಖರ್ಗೆ ಅವರ ಒಂದು ಹನಿ ರಕ್ತ ನೆಲಕ್ಕೆ ಚೆಲ್ಲಿದ್ದೇ ಆದರೆ ಬಿಜೆಪಿ ಅತಿ ಘೋರವಾದ ಪರಿಣಾಮ ಎದುರಿಸಬೇಕಾಗುತ್ತದೆ, ಎಚ್ಚರವಿರಲಿ. ಇದು “ಭೀಮ”ನ ನೆಲ ಎಂಬುದು ನೆನಪಿರಲಿ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

“>

ರಾಷ್ಟ್ರದ ಪ್ರಮುಖ ನಾಯಕರಾದ ಕರ್ನಾಟಕದ ಸ್ವಾಭಿಮಾನದ ಮಣ್ಣಿನ ಪುತ್ರ ಮಲ್ಲಿಕಾರ್ಜುನ್ ಖರ್ಗೆಯವರ ಕುಟುಂಬವನ್ನೇ “ಸಾಫ್”(ಮುಗಿಸುತ್ತೇನೆ) ಮಾಡುತ್ತೇನೆ ಎಂದಿದ್ದಾನೆ. ಬಿಜೆಪಿಯ ರೌಡಿ ಮೋರ್ಚಾದ ಲೀಡರ್.. ಕನ್ನಡಿಗರೇ, ಬಿಜೆಪಿ ಅಸ್ತಿತ್ವದಲ್ಲಿದ್ದರೆ ಜನಸಾಮಾನ್ಯರನ್ನೂ ಸಾಫ್ ಮಾಡುತ್ತಾರೆ, ಚುನಾವಣೆಯಲ್ಲಿ ನೀವೇ “ಸಾಫ್” ಮಾಡುವುದು ನಾಡಿಗೆ ಕ್ಷೇಮ ಎಂದು ಕಾಂಗ್ರೆಸ್ ಜನರಿಗೆ ಟ್ವೀಟ್ ಮೂಲಕ ಕರೆ ನೀಡಿದೆ.

ಬಿಜೆಪಿಗೆ ಮಲ್ಲಿಕಾರ್ಜುನ್ ಖರ್ಗೆಯವರನ್ನು ಕೊಲ್ಲುವಷ್ಟು ದ್ವೇಷ ಏಕೆ? ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಮುನ್ನುಡಿ ಬರೆದಿದ್ದಕ್ಕಾ? ಆರ್ಟಿಕಲ್ 371ಜೆ ಜಾರಿಗೋಸ್ಕರ ಹೋರಾಡಿ ಯಶಸ್ವಿಯಾಗಿದ್ದಕ್ಕಾ? ಲಕ್ಷಾಂತರ ಯುವಕರಿಗೆ ಉದ್ಯೋಗ ದೊರಕಿಸಿಕೊಟ್ಟಿದ್ದಕ್ಕಾ? ಕಾರ್ಮಿಕರ ಹಕ್ಕಿಗಾಗಿ ಹೋರಾಡಿದ್ದಕ್ಕಾ? ದುರಾಡಳಿತವನ್ನು ಪ್ರಶ್ನಿಸಿದ್ದಕ್ಕಾ? ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ವಿರೋಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೊಬ್ಬರನ್ನು ಕೊಲೆ ಮಾಡುವ ಸಂಚನ್ನು ಬಿಜೆಪಿಯ ಅಭ್ಯರ್ಥಿಯೇ ಮಾಡಿದ ಸಂಗತಿ ಹೊರಬಂದರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದೇಕೆ? ರಕ್ಷಣೆಯ ಹೊಣೆ ಹೊತ್ತ ಗೃಹಸಚಿವ ಅಮಿತ್ ಶಾ  ಮೌನವಾಗಿರುವುದೇಕೆ? ಬಿಜೆಪಿಯ ಈ ಮೌನ ಸಮ್ಮತಿಯ ಲಕ್ಷಣವೇ? ಅಥವಾ ಷಡ್ಯಂತ್ರದ ಜಾಣ ಮೌನವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ