Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ನಾಯಿ ಕೂಡ ತಿನ್ನದ ಅನ್ನವನ್ನು ನಮಗೆ ಕೊಟ್ಟಿದ್ದಾರೆ : ಚುನಾವಣಾ ಸಿಬ್ಬಂದಿ ಆಕ್ರೋಶ

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಯಾಗಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಳಪೆ ಗುಣಮಟ್ಟದ ತಿಂಡಿ ಹಾಗೂ ಊಟವನ್ನು ವಿತರಣೆ ಮಾಡಿದ್ದಕ್ಕೆ ಚುನಾವಣಾ ಅಧಿಕಾರಿಗಳು, ಪೊಲೀಸರು ಸೇರಿದಂತೆ ಸಿಬ್ಬಂದಿಗಳು ಕ್ಷೇತ್ರದ ಚುನಾವಣಾಧಿಕಾರಿ ವಿರುದ್ದ ವಿರುದ್ಧ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಾಹ್ನ ತಯಾರಿಸಲಾಗಿದ್ದ ಊಟದಲ್ಲಿ ಕೊರತೆ ಕಂಡು ಬಂದು ಸಿಬ್ಬಂದಿಗಳು ಕಾದು ಕುಳಿತುಕೊಳ್ಳುವಂತಾಯಿತು. ಆನಂತರ ತಯಾರಿಸಿದ ಅನ್ನವು ಮುಳ್ಳಕ್ಕಿಯಾಗಿದೆ, ಇದನ್ನು ತಿಂದವರು ಗತಿ ಏನು ? ಇದನ್ನೂ ನಾಯಿಯೂ ಕೂಡ ತಿನ್ನುವುದಿಲ್ಲ. ಚುನಾವಣಾ ಕಾರ್ಯಕ್ಕೆ ವಯಸ್ಸಾದವರನ್ನು ನಿಯೋಜನೆ ಮಾಡಲಾಗಿದೆ, ಅವರ ಗತಿಯೇನು ಎಂದು ಅಡುಗೆ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಸಿಬ್ಬಂದಿ ‘ನಾನು ಊಟವನ್ನು ಮಾಡಲ್ಲ ,ಕರ್ತವ್ಯಕ್ಕೂ ಹೋಗಲ್ಲ ತಹಶೀಲ್ದಾರ್ ಅವರೇ ಎಲ್ಲವನ್ನು ಮಾಡಿಕೊಳ್ಳಲಿ’ ಎಂದು ರೊಚ್ಚಿಗೆದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನಿಸರ್ಗ ಪ್ರಿಯ, ನಮ್ಮಿಂದ ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ ಕರ್ತವ್ಯಕ್ಕೆ ಹೊರಡಿ ಎಂದು ಮನವಿ ಮಾಡಿದರು.

ಮಧ್ಯಾಹ್ನ ಮೂರು ಗಂಟೆಯಾದರೂ ಶೇ.50 ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಇಲ್ಲವಾಗಿತ್ತು. ಜೊತೆಗೆ ತರಬೇತಿ ಸಮಯದಲ್ಲಿಯೂ ಸರಿಯಾಗಿ ಊಟ ಕೊಟ್ಟಿಲ್ಲ ಎಂದು ಸಿಬ್ಬಂದಿಗಳು ದೂರಿದರು. ಒಟ್ಟಾರೆ ಇದು ತಾಲ್ಲೂಕು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುವಂತೆ ಮಾಡಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ