ನರೇಂದ್ರ ಮೋದಿ ಅವರು ಆರ್ಥಿಕತೆಯನ್ನು ದಿಗ್ಭ್ರಮೆಗೊಳಿಸುವಷ್ಟು ಅಸಮರ್ಥರು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿಯೂ ಆಗಿರುವ ಅರ್ಥಶಾಸ್ತ್ರಜ್ಞ ಮತ್ತು ಸಾಮಾಜಿಕ ವಿಮರ್ಶಕ ಡಾ. ಪರಕಾಲ ಪ್ರಭಾಕರ್ ಹೇಳಿದ್ದಾರೆ.
ಪ್ರಭಾಕರ್ ಅವರ ಹೊಸ ಪುಸ್ತಕ ‘ದಿ ಕ್ರೂಕ್ಡ್ ಟಿಂಬರ್ ಆಫ್ ನ್ಯೂ ಇಂಡಿಯಾ: ಎಸ್ಸೇಸ್ ಆನ್ ಎ ರಿಪಬ್ಲಿಕ್ ಇನ್ ಕ್ರೈಸಿಸ್’ ಅನ್ನು (ಸ್ಪೀಕಿಂಗ್ ಟೈಗರ್ ಪ್ರಕಟಿಸಿದ) ಬೆಂಗಳೂರಿನಲ್ಲಿ ಭಾನುವಾರ ಔಪಚಾರಿಕವಾಗಿ ಬಿಡುಗಡೆ ಮಾಡಲಾಗಿದ್ದು, ಮೋದಿ ಸರ್ಕಾರದ ಸಮಸ್ಯೆಗಳು, ಆರ್ಥಿಕತೆ, ರಾಜಕೀಯ ಮತ್ತು ಇತರ ವಿಷಯಗಳ ಕುರಿತು ಪ್ರಬಂಧಗಳ ಸರಣಿಯನ್ನು ಒಳಗೊಂಡಿದೆ.
ಪ್ರಧಾನಿ ಮೋದಿ ಆಡಳಿತವು ಅರ್ಥಿಕತೆ ಮತ್ತು ಇತರ ಹಲವು ವಿಷಯಗಳ ನಿರ್ವಹಣೆಯಲ್ಲಿ ಅಸಮರ್ಥವಾಗಿದ್ದರೂ, ಜನರಲ್ಲಿ ಸುಪ್ತವಾಗಿರುವ ವಿಭಾ ಭಾವನೆಗಳನ್ನು ಹೊರ ತರಲು ಇದು ಅತ್ಯಂತ ಸಮರ್ಥವಾಗಿದೆ ಎಂದು ಡಾ.ಪರಕಾಲ ಅವರು, ಕರಣ್ ಥಾಪರ್ ಅವರೊಂದಿಗಿನ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ ನಿಂದ ಪಿಎಚ್.ಡಿ ಪಡೆದಿರುವ ಡಾ.ಪ್ರಭಾಕರ್ ಅವರು ಹಣಕಾಸು ಸಚಿವೆ ನಿರ್ಮಲಾ ತಾರಾಮನ್ ಅವರ ಪತಿ.
”2014ರ ಚುನಾವಣೆಯಲ್ಲಿ ಗೆಲ್ಲಲು ಬಳಸಿದ ಅಭಿವೃದ್ಧಿಯ ಹಲಗೆಯ ಮೇಲೆ ಗೆದ್ದ ಬಿಜೆಪಿಯು ಹಿಂದುತ್ವವನ್ನು ಕುತಂತ್ರದಿಂದ ಕಳ್ಳ ಸಾಗಣೆ ಮಾಡಿದೆ ಎಂದು ಅವರು ಹೇಳಿದ್ದಾರೆ. 2024 ರಲ್ಲಿ ಮತ್ತೊಂದು ಬಾರಿ ಮೋದಿ ಸರ್ಕಾರ ಬಂದರೆ ಅದು ಆರ್ಥಿಕತೆಗೆ ಮಾತ್ರವಲ್ಲದೆ, ಒಟ್ಟಾರೆ ಇಡೀ ರಾಷ್ಟ್ರಕ್ಕೆ ಆಪತ್ತು ತರಲಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ವರದಿಯಾಗಿದೆ.
2011 ರ ಚುನಾವಣೆಯ ಪೂರ್ವದಲ್ಲಿ ನಡೆದ ಹೋರಾಟವು ಹಿಂದೂ ಮತ್ತು ಮುಸ್ಲಿಮರ ನಡುವೆ ಆಗಿರಲಿಲ್ಲ ಎಂದು ಒತ್ತಿ ಹೇಳಿದ ಅವರು, ಆ ಹೋರಾಟವು, ಬಡತನ ಮತ್ತು ನಿರುದ್ಯೋಗದ ವಿರುದ್ಧ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಾಗಿ ನಡೆಸಿದ ಹೋರಾಟವಾಗಿತ್ತು” ಎಂದಿದ್ದಾರೆ.
”2014ರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯವರು, ಉತ್ತಮ ಆಡಳಿತ ಸ್ವಚ್ಛ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ಮತ್ತು ‘ಅಭಿವೃದ್ಧಿ’ ಭರವಸೆ ನೀಡಿ ಮತ ಕೇಳಿದ್ದರು” ಎಂದು ಹೇಳಿರುವ ಅವರು, ಹಿಂದೂ ರಾಷ್ಟ್ರ ಮತ್ತು ಹಿಂದುತ್ವದ ನಿಜವಾದ ಉದ್ದೇಶವನ್ನು ಮುಂದಿಟ್ಟು ನರೇಂದ್ರ ಮೋದಿ ಅವರು ಮೊದಲ ಬಾರಿಗೆ ದೇಶದ ಜನರ ವಿಶ್ವಾಸವನ್ನು ಗೆದ್ದಿರಲಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಹಿಂದುತ್ವವನ್ನು ಕಳ್ಳಸಾಗಣೆ ಮಾಡಲಾಗಿದೆ. ಟ್ರೋಜನ್ ಕುದುರೆಯಂತೆ ಅಭಿವೃದ್ಧಿ ಯನ್ನು ಬಳಸಲಾಗಿದೆ” ಎಂದು ಅವರು ಹೇಳಿದ್ದಾರೆ.
”ನಾಯಕತ್ವದ ಗುರಿಯು ಬಿರುಕುಗಳನ್ನು ತೆಗೆದುಹಾಕುವುದು ಮತ್ತು ಸಾಮರಸ್ಯವನ್ನು ಉತ್ತೇಜಿಸುವುದಾಗಿದೆ, ಅದನ್ನು ಬಿಟ್ಟು, ಕೋಮು ಭಾವನೆಗಳಿಗೆ ದಕ್ಕೆ ತರುವುದು ನಾಯಕರ ಕೆಲಸವಲ್ಲ” ಎಂದು ಡಾ. ಪ್ರಭಾಕರ್ ಹೇಳಿದ್ದಾರೆ.
”ಬಿಜೆಪಿ ಮತ್ತು ಮೋದಿ ಅವರು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಯಸಿದರೆ ಅದನ್ನು ಅವರು 2014 ರ ಚುನಾವಣೆಯಲ್ಲಿ ಸ್ಪರ್ಧಿಸುವಾಗಲೇ ಹೇಳಬೇಕಿತ್ತು”. ವಿಭಜನೆಯ ಸಮಯದಲ್ಲಿ ಭಾರತದಲ್ಲಿ ಹಿಂದೂ ಬಹುಸಂಖ್ಯಾತವಾದವು ಸ್ವೀಕಾರಾರ್ಹತೆಯನ್ನು ಕಂಡಿರಲಿಲ್ಲ. ವಿಭಜನೆಯ ನಂತರ ಹಿಂದುತ್ವ ರಾಷ್ಟ್ರೀಯವಾದಿ ರಾಜಕಾರಣಕ್ಕೆ ಭಾರತದಲ್ಲಿ ಹೆಚ್ಚಿನ ಸಾಧ್ಯತೆ ಇತ್ತು. ದೇಶ ವಿಭಜನೆ ವೇಳೆ ಎರಡೂ ಸಮುದಾಯಗಳ ಲಕ್ಷಾಂತರ ಜನರು ಸಾಮೂಹಿಕವಾಗಿ ವಲಸೆ ಹೋಗುತ್ತಿದ್ದರು. ಎರಡೂ ದೇಶಕ್ಕೂ ಸಾವಿರಾರು ಮೃತದೇಹಗಳು ಬರುತ್ತಿದ್ದವು. ಆ ಸಮಯದಲ್ಲಿ ಅಭದ್ರತೆ ಮತ್ತು ಭಯ ಹೆಚ್ಚಿತ್ತು, ಆಗ ಹಿಂದುತ್ವ ರಾಜಕಾರಣ ಬೆಳೆಯಲು ಅನುಕೂಲ ಸನ್ನಿವೇಶ ಇದ್ದರೂ, ಆಗ ಬಹುಸಂಖ್ಯಾತವಾದಕ್ಕೆ ಭಾರತದಲ್ಲಿ ಮಾನ್ಯತೆ ಸಿಗಲಿಲ್ಲ” ಎನ್ನುವುದನ್ನು ಅವರು ಗಮನ ಸೆಳೆದರು.
”ಏಳು ದಶಕಗಳ ನಂತರ ಹಿಂದು ರಾಜಕಾರಣಕ್ಕೆ ಸ್ವೀಕಾರ ಸಿಗುತ್ತಿದೆ, ಬಹುಶಃ ವಿಭಜನೆಯ ಬಗ್ಗೆ ಯಾವುದೇ ಕಹಿ ನೆನಪಿಲ್ಲದ ಮತ್ತು ಅದರಿಂದ ಬಳಲದಿರುವ ಭಾರತೀಯರ ತಲೆಮಾರಿನಲ್ಲಿ ಅದಕ್ಕೆ ಮಾನ್ಯತೆ ಸಿಗುತ್ತಿದೆ” ಎಂದು ಹೇಳಿದ್ದಾರೆ.
”ಅರ್ಥಶಾಸ್ತ್ರದಲ್ಲಿ ಕೆಲವು ಮೂಲಭೂತ ತರಬೇತಿ ಹೊಂದಿರುವ ಯಾವುದೇ ಅರ್ಥಶಾಸ್ತ್ರಜ್ಞರು, ಇಷ್ಟು ದೊಡ್ಡ ಪ್ರಮಾಣದಲ್ಲಿ ನೋಟು ಅಮಾನ್ಯೀಕರಣವನ್ನು ಶಿಫಾರಸು ಮಾಡುತ್ತಿರಲಿಲ್ಲ” ಎಂದು ನರೇಂದ್ರ ಮೋದಿಯವರ ನೋಟು ಅಮಾನೀಕರಣದ ವಿರುದ್ಧ ಧ್ವನಿ ಎತ್ತಿರುವ ಅವರು, ”ನೋಟು ರದ್ದತಿ ಒಂದು ದೊಡ್ಡ ಪ್ರಮಾದ, ಇದು ಬಿಕ್ಕಟ್ಟನ್ನು ಉಲ್ಬಣಗೊಳಿಸಿತು” ಎಂದು ತಿಳಿಸಿದ್ದಾರೆ.




