Wednesday, November 18, 2026

ಪ್ರಾಯೋಗಿಕ ಆವೃತ್ತಿ

”ನಕಲಿ ಪದವಿ ಪ್ರಮಾಣ ಪತ್ರ ಪಡೆದವನ ಆರಾಧಕರಿಗೆ ಅರ್ಥವಾಗುವುದಿಲ್ಲ!” ಎಂದು ಬಿಜೆಪಿಯ ಕಾಲೆಳೆದ ಕಾಂಗ್ರೆಸ್

ಬಿಜೆಪಿ ಹೀನಾಯವಾಗಿ ಸೋತಿದ್ದೇಕೆ ಎಂಬ ವಿಮರ್ಶೆ ಮುಗಿಯಿತೆ? ನಾವು ನಮ್ಮ ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತೇವೆ, ಇದರ ಬಗ್ಗೆ ನಿಮಗೆ ಅನುಮಾನವಿದ್ದರೆ ನಿಮ್ಮವರೇ ಆದ ಯಡಿಯೂರಪ್ಪ

ಅವರನ್ನು ಕೇಳಿ. ಹಾಗೆಯೇ “ಪದವೀಧರರು” ಎಂದರೆ ಪದವಿ ಪ್ರಮಾಣಪತ್ರ ಪಡೆದವರು ಎನ್ನುವುದು ನಕಲಿ ಪದವಿ ಪ್ರಮಾಣ ಪತ್ರ ಪಡೆದವನ ಆರಾಧಕರಿಗೆ ಅರ್ಥವಾಗುವುದಿಲ್ಲ! ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ಧ ಕಿಡಿಕಾರಿದೆ. 

“>

‘ಕಾಂಗ್ರೆಸ್ಸಿನ ಗ್ಯಾರಂಟಿಗಳು ಸರ್ಕಾರ ಬಂದ ಕ್ಷಣದಲ್ಲಿಯೇ ತನ್ನ ಗ್ಯಾರಂಟಿಯನ್ನು ಕಳೆದುಕೊಂಡಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳಿಗೆ ಈಗ “‍ಷರತ್ತು ಬದ್ಧ ” ಎಂಬ ಲೇಬಲ್‌ ಅಂಟಿಸಿ ಕಾಂಗ್ರೆಸ್‌ ಸರ್ಕಾರ ಮತದಾರರಿಗೆ ದ್ರೋಹ ಬಗೆಯುತ್ತಿದೆ ಎಂದು ಬಿಜೆಪಿ ಮಾಡಿರುವ ಟ್ವೀಟ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಪಕ್ಷವು, ಐದು ವರ್ಷಕ್ಕೆ 5 ಸಿಎಂಗಳನ್ನು ಬದಲಿಸಿ, ಒಬ್ಬರಿಂದಲೂ 2,500 ಕೋಟಿ ವಸೂಲಿ ಮಾಡುವ ಅಮಿತ್ ಷಾ ಅವರ ಯೋಜನೆಗೆ ಕನ್ನಡಿಗರು ತಣ್ಣೀರು ಎರಚಿದ್ದಾರೆ. 12,500 ಕೋಟಿ ನಷ್ಟವಾದ ಬೇಜಾರು ಹೈಕಮಾಂಡಿಗೆ, ಮಂತ್ರಿಗಿರಿ ಮಾರಿಕೊಳ್ಳುವ ಅವಕಾಶ ತಪ್ಪಿತಲ್ಲ ಎಂಬ ನೋವು ಬಿಜೆಪಿ ಗೆ! ಬಿಜೆಪಿಯ ಎಟಿಎಂ ಕರ್ನಾಟಕದಲ್ಲಿ ಶಾಶ್ವತವಾಗಿ ಬಂದ್ ಆಗಿದೆ ಎಂದು ವ್ಯಂಗ್ಯವಾಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ