ಮಂಡ್ಯ ನಗರದ ಹೃದಯ ಭಾಗದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆಗೆ ನಾಮಫಲಕ ಅಳವಡಿಸುವಂತೆ ದಲಿತ ಮುಖಂಡರ ನೀಯೋಗ ಜಿಲ್ಲಾಧಿಕಾರಿರವರನ್ನು ಭೇಟಿಯಾಗಿ ಮನವಿ ಮಾಡಿತು.
ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರು, ಮಂಡ್ಯ ನಗರದ ಪರಿಶಿಷ್ಟ ನಿವಾಸಿಗಳು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ರವರಿಗೆ ಮನವಿ ಸಲ್ಲಿಸಿ, ಅಂಬೇಡ್ಕರ್ ವೃತ್ತದಿಂದ ಡಾ.ಬೆಸಗರಹಳ್ಳಿ ರಾಮಣ್ಣ ವೃತ್ತದವರೆಗೆ 1976 ರಲ್ಲಿ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜೋಡಿ ರಸ್ತೆ ಎಂದು ನಾಮಕರಣ ಮಾಡಲು ಸರ್ವಾನುಮತದ ನಿರ್ಣಯ ಮಾಡಿದ್ದು. ಹಾಗಾಗಿ ಸದರಿ ರಸ್ತೆಗೆ ಪರ್ಯಾಯ ಹೆಸರು ನಾಮಕರಣ ಮಾಡುವ ನಿರ್ಣಯಕ್ಕೆ ಮಾನ್ಯತೆ ನೀಡದೆ ತುರ್ತು ಕ್ರಮ ವಹಿಸಲು ಮುಂದಾಗುವಂತೆ ಒತ್ತಾಯಿಸಿದರು.
ಡಾ.ಬಿ.ಆರ್ ಅಂಬೇಡ್ಕರ್ ರಸ್ತೆಯ ನಾಲ್ಕು ಪ್ರಮುಖ ವೃತ್ತಗಳಲ್ಲಿ ರಸ್ತೆಯ ನಾಮಫಲಕ ಅಳವಡಿಸಬೇಕು. ರಸ್ತೆಯಲ್ಲಿರುವ ಅಂಗಡಿಗಳ ಪರವಾನಗಿ ನವೀಕರಣ ಸಂದರ್ಭದಲ್ಲಿ ಪರವಾನಿಗೆಯಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ಎಂದು ಕಡ್ಡಾಯವಾಗಿ ನಮೂದಿಸಬೇಕೆಂದು ಆಗ್ರಹಿಸಿದರು.
ಈ ರಸ್ತೆಯಲ್ಲಿರುವ ಅಂಗಡಿಗಳ ನಾಮಫಲಕಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ಎಂದು ಹಾಕುವಂತೆ ವರ್ತಕರಿಗೆ ನೋಟಿಸ್ ಮೂಲಕ ಸೂಚಿಸಬೇಕು. ಅಂಗಡಿಗಳ ನಾಮಫಲಕಗಳಲ್ಲಿ ರಸ್ತೆ ಹೆಸರು ಹಾಕದ ವರ್ತಕರ ಪರವಾನಗಿ ರದ್ದು ಮಾಡಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು
ಹಿರಿಯ ದಲಿತ ಮುಖಂಡರಾದ ವೆಂಕಟಗಿರಿಯಯ್ಯ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಎಂ.ಎಲ್.ತುಳಶೀಧರ್, ಪತ್ರಕರ್ತ ಎಂ.ಎಸ್.ಮೂರ್ತಿ, ಎಂ ವಿ ಕೃಷ್ಣ, ರಮಾನಂದ ತರೀಕೆರೆ ಕಾಲೋನಿ,ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ, ಲಕ್ಷ್ಮಣ್ ಚೀರನಹಳ್ಳಿ, ಎಸ್ಆರ್ ಟಿಸಿ ಬಾಲರಾಜ್, ಲಕ್ಷ್ಮಿಕಾಂತ್, ಬಹುಜನ ಸಮಾಜ ಪಕ್ಷದ ದಿನೇಶ್ ಎಂ ಪಿ.ಶಿವರಾಮಮೂರ್ತಿ, ಎಂ.ಸಿ ಶಿವಶಂಕರ್, ಎಂ ಸಿ ಭರತ್ ಕುಮಾರ್, ಎಂ.ಬಿ.ಸುಜಾತ ಅಮರ್, ಕಾಂಗ್ರೆಸ್ ಮುಖಂಡ ಹಾಲಹಳ್ಳಿ ಸಂಪತ್ ಇತರರಿದ್ದರು.




