Saturday, November 21, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿ – ಜೆಡಿಎಸ್ ಗೆದ್ದಿದ್ದರೆ ಯಾವ ಯೋಜನೆಯನ್ನು ಜಾರಿಗೊಳಿಸುತ್ತಿರಲಿಲ್ಲ – ಸಚಿವ ಚಲುವರಾಯಸ್ವಾಮಿ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಜನತೆಯ ಬೆಂಬಲ ಪಡೆದು ಚುನಾವಣೆಯಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದೆ, ಒಂದು ವೇಳೆ ಬಿಜೆಪಿ, ಜೆಡಿಎಸ್ ಏನಾದರೂ ಗೆದ್ದಿದ್ದರೆ ‘ಅವರಪ್ಪನಾಣೆಗೂ ಒಂದೇ ಒಂದು ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿರಲಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ನಾಗಮಂಗಲ ಪಟ್ಟಣದಲ್ಲಿ ಮಂಗಳವಾರ ನಡೆದ ಮತದಾರರಿಗೆ ಕೃತಜ್ಞತೆ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್ – ಬಿಜೆಪಿ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಿಲ್ಲ ಎಂದು ಅಂದುಕೊಂಡಿದ್ದವು. ಆದರೆ ನಾವು ಎಲ್ಲ ಯೋಜನೆಗಳನ್ನು ಜಾರಿ ಮಾಡಿದ್ದೇವೆ, ನಾವು ಮೊದಲ ಕ್ಯಾಬಿನೆಟ್ ನಲ್ಲೆ ಎಲ್ಲ ಐದು ಭರವಸೆಗಳನ್ನ ಜಾರಿ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯಡೆಲ್ಲೆಡೆ ಉಚಿತ ಸಾರಿಗೆ ವ್ಯವಸ್ಥೆಯನ್ನು ಮಹಿಳೆಯರಿಗೆ ಕೊಟ್ಟಿದ್ದೇವೆ, ಜುಲೈ ತಿಂಗಳಿಂದ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ. ವಿದ್ಯುತ್ ಬಿಲ್ಲನ್ನ ಏಪ್ರಿಲ್, ಮೇ, ಜೂನ್ ತಿಂಗಳ ಸರಾಸರಿ ಅಂದಾಜು ಮಾಡಿ, ಜುಲೈ 1ರಿಂದ ಜಾರಿ ಮಾಡುತ್ತೇವೆ. ಆಗಸ್ಟ್ 15ರಿಂದ ಪ್ರತಿಯೊಬ್ಬ ಮಹಿಳೆಗ ₹ 2,000 ಹಣ, 2022-23ನೇ ಸಾಲಿನ ಪದವೀಧರರಿಗೆ 180 ದಿನಗಳ ಒಳಗೆ ಉದ್ಯೋಗ ಸಿಗದೇ ಇದ್ದ ಸಂದರ್ಭದಲ್ಲಿ ಅವರಿಗೆ 3000 ಸಾವಿರ, ಡಿಪ್ಲೊಮೊ ದವರಿಗೆ 1500 ಹಣವನ್ನ ನೀಡುತ್ತೇವೆ ಎಂದು ವಿವರಿಸಿದರು.

nudikarnataka.com

ಮೈಷುಗರ್ ಗೆ ₹ 50 ಕೋಟಿ 

ಮಂಡ್ಯ ಸಕ್ಕರೆ ಕಾರ್ಖಾನೆಗೆ ₹ 50 ಕೋಟಿ ಹಣವನ್ನು ಬಿಡುಗಡೆ ಮಾಡಿ, ಹತ್ತು ದಿನಗಳಲ್ಲೇ ಚಾಲನೆ ನೀಡಿದ್ದೇವೆ, ಸಿಎಂ ಸಿದ್ದರಾಮಯ್ಯ ಹೇಳಿದಂತೆ ನೀವು ನನಗೆ ಅವಕಾಶ ಕೊಟ್ಟು ಗೆಲ್ಲಿಸಿದ್ದೀರಾ, ಆ ನಿಟ್ಟಿನಲ್ಲಿ ಇಂದು ಕೃತಜ್ಞತ ಸಭೆ ಮಾಡಿ ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. 4414 ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಸವಾಲಿನ ಖಾತೆ

ಕೃಷಿ ಖಾತೆ ಅತ್ಯಂತ ಸವಾಲಿನ ಖಾತೆ, ನಮ್ಮ ನಾಯಕರಿಗೆ ಆ ಖಾತೆ ಸಚಿವರಾಗುವ ಅವಕಾಶ ದೊರೆತಿದೆ, ಹಿಂದೆ ಇದ್ದ ಸಚಿವರಿಗಿಂತ ಉತ್ತಮ ಮಟ್ಟದ ಅಭಿವೃದ್ಧಿಯನ್ನ ನಮ್ಮ ನಾಯಕರಾದ ಚಲುವರಾಯಸ್ವಾಮಿ ಮಾಡುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ ಡಿ ಗಂಗಾಧರ್ ಹೇಳಿದರು.

ಒಗ್ಗಟ್ಟಾಗಿ ನಮ್ಮ ಗೆಲುವಿಗೆ ತಾಲ್ಲೂಕಿನ ಜನರೆಲ್ಲರೂ ಮತ ನೀಡಿ ಜಯಶೀಲರನ್ನಾಗಿಸಿದ್ದೀರಾ, ನಿಮಗೆ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ ಎಂದು ಧನಲಕ್ಷಿ ಚಲುವರಾಯಸ್ವಾಮಿ ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ