Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಹೆಚ್ಚುತ್ತಿರುವ ಹೆಬ್ಬಾವು ಸಂತತಿ ; ಮೂಡಲದೊಡ್ಡಿಯಲ್ಲಿ ಮತ್ತೊಂದು ಹೆಬ್ಬಾವು ಸೆರೆ

ಇತ್ತಿಚೀನ ವರ್ಷಗಳಲ್ಲಿ ಮದ್ದೂರು ತಾಲ್ಲೂಕಿನ ಶಿಂಷಾ ನದಿಯಲ್ಲಿ ಹಾಸು ಪಾಸಿನ ಗ್ರಾಮಗಳಲ್ಲಿ ಹೆಚ್ಚಾಗಿ ಹೆಬ್ಬಾವುಗಳು ಕಾಣಿಸಿಕೊಳ್ಳಲು ಆರಂಭಿಸಿವೆ.

ನಿನ್ನೆಯಷ್ಟೆ ಮದ್ದೂರು ತಾಲ್ಲೂಕಿನ ಮೂಡಲದೊಡ್ಡಿ ಗ್ರಾಮದ ಅಭಿನವ ಭಾರತಿ ಶಾಲೆ ಬಳಿ ಹೆಬ್ಬಾವು ಕಾಣಿಸಿಕೊಂಡಿದ್ದು, ಉರಗ ತಜ್ಞರಾದ ಚಿಕ್ಕದೊಡ್ಡಿ ಗ್ರಾಮದ ಕೀರ್ತಿ ಹಾಗೂ ಮಹೇಶ್ ಎಂಬುವವರು ಆ ಹಾವನ್ನ ಸೆರೆ ಹಿಡಿದು ಕಾಡಿಗೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಾವು ಮೂಡಲದೊಡ್ಡಿಯಲ್ಲಿ ಕಾಣಿಸಿಕೊಂಡ 6ನೇ ಹಾವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೆ ಮದ್ದೂರು ತಾಲ್ಲೂಕಿನ ಶಿಂಷಾ ನದಿಯ ಸಮೀಪ ಚಾಮನಹಳ್ಳಿಯ ಬಳಿ ಸುಮಾರು 6 ಅಡಿ ಉದ್ದದ ಬೃಹತ್ ಗಾತ್ರ ಹೆಬ್ಬಾವು ಕುರಿಯನ್ನು ನುಂಗಲು ಪ್ರಯತ್ನಿಸಿ ಸಿಕ್ಕಿ ಬಿದ್ದಿತ್ತು, ಇದನ್ನು ಸೆರೆ ಹಿಡಿದ ಉಗರ ತಜ್ಞರು ಅರಣ್ಯಕ್ಕೆ ಬಿಟ್ಟು ಬಂದಿದ್ದರು.

ಮಂಡ್ಯ ಜಿಲ್ಲೆಯಲ್ಲಿ ಮದ್ದೂರು ತಾಲ್ಲೂಕಿನಲ್ಲಿ ಹೆಬ್ಬಾವುಗಳು ಆಗಿಂದ್ದಾಗ್ಗೆ ಪತ್ತೆಯಾಗುತ್ತಿರುವುದು ಈ ಭಾಗದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಅದ್ದರಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದರು.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ