Wednesday, November 18, 2026

ಪ್ರಾಯೋಗಿಕ ಆವೃತ್ತಿ

ವಿ.ಸಿ.ಫಾರಂ | ಪೂರ್ವ ಮುಂಗಾರು ತಾಂತ್ರಿಕ ಅಧಿವೇಶನ ಯಶಸ್ವಿ

ಮಂಡ್ಯ ವಲಯ ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಮಹಾವಿದ್ಯಾಲಯ, ವಿ ಸಿ ಫಾರಂ, ಮಂಡ್ಯ ರವರ ಸಂಯುಕ್ತಾಶ್ರಯದಲ್ಲಿ ಇತ್ತಿಚೇಗೆ ಕೃಷಿ ಮಹಾವಿದ್ಯಾಲಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಪೂರ್ವ ಮುಂಗಾರು ತಾಂತ್ರಿಕ ಅಧಿವೇಶನ-2023 ನಡೆಯಿತು.

ಕೃಷಿ ಡೀನ್ ಡಾ. ಎಸ್ ಎಸ್ ಪ್ರಕಾಶ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ರೈತ ಬಾಂಧವರು ಕೃಷಿ ವಿಶ್ವವಿದ್ಯಾನಿಲಯವು ಕರ್ನಾಟಕದ ದಕ್ಷಿಣ ಒಣ ವಲಯಕ್ಕೆ ಬಿಡುಗಡೆ ಮಾಡಿರುವ ವಿವಿಧ ಬೆಳೆಗಳ ನೂತನ ತಳಿಗಳು ಮತ್ತು ತಾಂತ್ರಿಕತೆಗಳ ವಿವರಗಳನ್ನು ವಿಜ್ಞಾನಿಗಳೊಂದಿಗೆ ಚರ್ಚಿಸಿ ತಿಳಿದುಕೊಂಡು ತಮ್ಮ ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ಅಧಿಕ ಇಳುವರಿಯನ್ನು ಪಡೆದು ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು

ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ವಿ ಎಸ್ ಅಶೋಕ್, ಸಹ ಸಂಶೋಧನಾ ನಿರ್ದೇಶಕ ಕೆ ವಿ ಕೇಶವಯ್ಯ, ಡಿಪ್ಲೊಮ ಕಾಲೇಜಿನ ಪ್ರಾಂಶುಪಾಲರಾದ ಡಾ ಪಿ ಎಸ್ ಫಾತಿಮಾ ಮತ್ತು ಸಹ ವಿಸ್ತರಣಾ ನಿರ್ದೇಶಕ ಡಾ. ಡಿ. ರಘುಪತಿ ಹಾಗೂ ಆವರಣದ ಎಲ್ಲಾ ವಿಜ್ಞಾನಿಗಳು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ