Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮೈಶುಗರ್‌ ಗೆ ₹ 50 ಕೋಟಿ | ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸುನಂದಾ ಜಯರಾಂ

ಮಂಡ್ಯ ಜಿಲ್ಲೆಯ ಜೀವನಾಡಿ ಮೈಶುಗರ್ ಕಾರ್ಖಾನೆಗೆ ಕಾಂಗ್ರೆಸ್‌ ಸರ್ಕಾರವು ₹ 50 ಕೋಟಿ ರೂಪಾಯಿ ಅನುದಾನ ನೀಡಿರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದ್ದಾರೆ.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಕಬ್ಬು ಬೆಳೆಗಾರರು ಹಾಗೂ ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಸರ್ಕಾರ ಸ್ಪಂದಿಸಿ, ಕಾರ್ಖಾನೆ ಉಳಿಸುವುದರ ಜೊತೆಗೆ, ಪ್ರಸ್ತುತ ಸರ್ಕಾರ ಜವಾಬ್ದಾರಿ ತೆಗೆದು ಕೊಂಡು ಕಾರ್ಖಾನೆಯ ಯಶಸ್ವಿ ಕಾರ್ಯ ನಿರ್ವಹಣೆಗೆ ₹ 50 ಕೋಟಿ ರೂಪಾಯಿ ಅನುದಾನ ನೀಡಿರುವುದನ್ನು ಅಭಿನಂದಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಶುಗರ್‌ ಉಳಿವಿಗೆ ಹೋರಾಟ ನಡೆಸುತ್ತಿದ್ದ ಸ್ಥಳಕ್ಕೆ ಈ ಹಿಂದೆ ಆಗಮಿಸಿದ ಸಿದ್ದರಾಮಯ್ಯ ಅವರು ಭರವಸೆ ನೀಡಿದಂತೆ ನಡೆದು ಕೊಂಡಿದ್ದಾರೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರ ಕಾಳಜಿಯೂ ಸೇರಿಕೊಂಡಿದೆ. ರೈತರ ಉಳಿವಿಗೆ ಒಂದು ದಿಟ್ಟ ನಿರ್ಧಾರವನ್ನು ಕಾಂಗ್ರೆಸ್‌ ಸರ್ಕಾರದ ತೆಗೆದುಕೊಂಡಿದೆ. ಅದರಂತೆ ಕಾರ್ಖಾನೆ ನಿರಂತರವಾಗಿ ನಡೆಯಬೇಕು. ಆ ಮೂಲಕ ರೈತರನ್ನು ಉಳಿಸಬೇಕು ಎಂದಿದ್ದಾರೆ ಅವರು ತಿಳಿಸಿದ್ದಾರೆ.

ಜಾಹೀರಾತು

ಮೈಶುಗರ್‌ ಕಾರ್ಖಾನೆ ಕರ್ನಾಟಕ ರಾಜ್ಯಕ್ಕೆ ಒಂದು ಘನತವೆತ್ತ ಕಾರ್ಖಾನೆಯಾಗಿದೆ. ಮುಂದೆಯೂ ಸಹ  ಮೈಶುಗರ್‌ ಯಶಸ್ವಿಗೆ ಸಹಕರಿಸುವ ವಿಶ್ವಾಸವನ್ನು ಕಾಂಗ್ರೆಸ್‌ ಸರ್ಕಾರ ನೀಡುತ್ತದೆ ಎಂಬುದನ್ನು ಹೋರಾಟಗಾರರಾದ ನಾವು ನಂಬಿದ್ದೇವೆ, ಮೈಶುಗರ್‌ ವ್ಯಾಪ್ತಿಯ ಕಬ್ಬು ಬೆಳೆಗಾರರು ”ನಮ್ಮ ಕಬ್ಬು ನಮ್ಮ ಕಾರ್ಖಾನೆ”ಗೆ ಎಂಬ ಘೋಷಣೆಯಡಿ ಕಬ್ಬು ಸರಬರಾಜು ಮಾಡಿ ಸಹಕರಿಸಬೇಕು ಅವರು ಮನವಿ ಮಾಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ