Thursday, November 19, 2026

ಪ್ರಾಯೋಗಿಕ ಆವೃತ್ತಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಂಕರಲಿಂಗೇಗೌಡ  ಆಯ್ಕೆ

ಮಂಡ್ಯ ತಾಲೂಕಿನ ದುದ್ದ ಗ್ರಾಮದಲ್ಲಿರುವ ದುದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಶಂಕರಲಿಂಗೇಗೌಡ ಬೊಮ್ಮನಹಳ್ಳಿ ಆವಿರೋಧ ಆಯ್ಕೆಯಾದರು.

ಕಳೆದ ಅವಧಿಯ ಅಧ್ಯಕ್ಷರಾಗಿದ್ದ ಎಂ.ಬಿ ಶಿವರಾಂ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯು ಸಹಕಾರ ಇಲಾಖೆಯ ಅಧಿಕಾರಿ ಎನ್.ಎಲ್.ರವಿ ಅವರ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆಯು ನಡೆಯಿತು.

ನೂತನ ಅಧ್ಯಕ್ಷ ಶಂಕರಲಿಂಗೇಗೌಡ ಬೊಮ್ಮನಹಳ್ಳಿ ಮಾತನಾಡಿ, ಎಲ್ಲಾ ನಿರ್ದೇಶಕರ ಸಹಕಾರ ಮತ್ತು ಗ್ರಾಮಸ್ಥರ ನೆರವಿನೊಂದಿಗೆ ಪತ್ತಿನ ಸಹಕಾರವನ್ನು ಅಭಿವೃದ್ಧಿ ಪಡಿಸಲು ಸಂಕಲ್ಪ ಮಾಡಿದ್ದೇನೆ, ಎಲ್ಲರೂ ಸಹಕರಿಸಿ, ಕಾಂಗ್ರೆಸ್ ಮುಖಂಡ ರವಿ ಬೋಜೇಗೌಡ ಅವರ ಮಾರ್ಗದರ್ಶನದಲ್ಲಿ ಕೃಷಿ ಪತ್ತಿನ ಸಹಕಾರ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಗೊಳಿಸಲು ಎಲ್ಲರೂ ಸಹಕರಿಸೋಣ ಎಂದರು.

ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಡಿ ಎನ್ ನರಸಿಂಹೇಗೌಡ, ಬೀಚನಹಳ್ಳಿ ಶಿವಕುಮಾರ್, ಹೆಚ್ ಜೆ ಹರೀಶ್, ಎಂ ಜೆ ನಾಗರಾಜು, ಬೋರಯ್ಯ,  ಪುಟ್ಟಸ್ವಾಮಿ, ಸರೋಜಮ್ಮ ಸಾಕಮ್ಮ,  ಡಿಸಿಸಿ ಬ್ಯಾಂಕ್ ನ ಪ್ರತಿನಿಧಿ ಮಾನಸ್ ಮತ್ತಿತರರು ಅಭಿನಂದಿಸಿದರು. ಸಂಘದ ಉಪಾಧ್ಯಕ್ಷರಾಗಿ ರಾಮಶೆಟ್ಟಿ ಅವರು ಮುಂದುವರಿಯಲಿದ್ದಾರೆ.

ಕಾರ್ಯಕ್ರಮದಲ್ಲಿ ಸಂಘದ ಪ್ರಭಾರ ಸಿಇಓ ಎಂ ಸಿ ದೀಪಕ್ ಹಾಗೂ ನೌಕರ ವರ್ಗ ಮತ್ತು ವಿವಿಧ ಗ್ರಾಮಗಳ ಮುಖಂಡರು, ಹಿತೈಷಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ