Friday, November 20, 2026

ಪ್ರಾಯೋಗಿಕ ಆವೃತ್ತಿ

ಆರಾಧಕರಿಂದ ಕಲೆ, ಸಂಗೀತ, ಸಾಹಿತ್ಯ ಉಳಿದು ಬೆಳೆಯಲು ಸಾಧ್ಯ

ಕಲಾ ಆರಾಧಕರಿಂದಲೇ ಕಲೆ, ಸಾಹಿತ್ಯ, ಸಂಗೀತ ಉಳಿದು ಬೆಳೆಯಲಿಕ್ಕೆ ಸಾಧ್ಯ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.

ಮಂಡ್ಯ ನಗರದ ಗಾಂಧಿಭವನದಲ್ಲಿ ಸಂಗೀತ ನೃತ್ಯ ಕಲಾನಿಕೇತನ ಟ್ರಸ್ಟ್ ಹಾಗೂ ಜೈ ಕರ್ನಾಟಕ ಪರಿಷತ್ ವತಿಯಿಂದ ಆಯೋಜಿಸಿದ್ದ ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಸಂಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗೀತಕ್ಕೆ ಎಲ್ಲವನ್ನು ಸೆಳೆದುಕೊಳ್ಳುವ ಮಹತ್ತರವಾದ ಶಕ್ತಿಯಿದೆ, ಎಲ್ಲರನ್ನೂ ಉದ್ದರಿಸುವ ಸಾಮರ್ಥ್ಯ, ತಾಕತ್ತಿದೆ, ಎಲ್ಲಾ ನೋವು ಮರೆಸಿ, ನಲಿವು, ನೆಮ್ಮದಿ ನೀಡುವ ಔಷಧೀಗುಣವಿದೆ, ಜೀವನದಲ್ಲಿನ ಹವಾರು ನೋವುಗಳನ್ನು ಉತ್ತಮ ಸಾಹಿತ್ಯ, ಸಂಗೀತ ಮರೆಸಬಲ್ಲದು ಎಂದು ನುಡಿದರು.

ಸುಗಮ ಸಂಗೀತ ಗಾಯಕ ಡಾ.ಮಾದೇಶ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದ ಜೀವನದಲ್ಲಿ ಪ್ರತಿಯೊಬ್ಬರೂ ಒತ್ತಡಲ್ಲಿಯೇ ಜೀವನ ನಡೆಸುತ್ತಿದ್ದಾರೆ, ಒತ್ತಡದಿಂದಲೇ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ, ಸಂಗೀತ ಕೇಳುವುದರಿಂದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು, ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ತಿಳಿಸಿದರು.

ಬದಲಾದ ಜೀವನ ಶೈಲಿಯಲ್ಲಿ ಭಾರತದೇಶಲ್ಲಿ ಸುಮಾರು 10ಕೋಟಿ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ, ಅಧಿಕ ರಕ್ತದೊತ್ತಡ ರೋಗಿಗಳು ಹೆಚ್ಚಾಗುತ್ತಿದ್ದಾರೆ, ಮನುಷ್ಯ ಒತ್ತಡಲ್ಲೇ ಬದುಕಿ ಸಾಗಿಸುತ್ತಿರು ಕಾರಣದಿಂದ ರೋಗಗಳು ಉಲ್ಬಣವಾಗುತ್ತಿದೆ. ಸಂಗೀತ ಕೇಳುವುದು, ಸಾಹಿತ್ಯ ಓದುವುದು, ನೆಮ್ಮದಿ ಬದುಕು ಕಟ್ಟಿಕೊಳ್ಳುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು, ಮಾನಸಿಕ ಒತ್ತಡದಿಂದ ಪಾರಾಗಬಹುದು, ಸಂಗೀತ ಆಲಿಸುವ ತಾಳ್ಮೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ಸಂಪಹಳ್ಳಿ ಎಸ್.ಸಿ.ಬಸವರಾಜು, ಸಂಗೀತ ನೃತ್ಯ ಕಲಾನಿಕೇತನ ಸಂಸ್ಥೆ ಅಧ್ಯಕ್ಷೆ ಶೋಭ ಪಿ.ಗೌಡ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ, ಗಾಯಕ ಶೇಖರ್, ಪರಸ್ಪರ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಿ.ದೇವರಾಜು ಕೊಪ್ಪ, ಸಮಾಜ ಸೇವಕಿ ಪದ್ಮ ಶ್ರೀನಿವಾಸ್, ಜಿ.ವಿ.ಕೆ.ಪ್ರತಿಷ್ಠಾನ ಅಧ್ಯಕ್ಷ ಆರ್.ವಾಸು, ಟ್ರಸ್ಟಿ ದೀಪಕ್, ಎಸ್.ರವಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಗಾಯಕರು, ಸಿನಿಮಾ, ಜಾನಪದ, ರಂಗಗೀತೆ, ಭಾವಗೀತೆಗಳನ್ನು ಹಾಡಿ ಸಭಿಕರ ಮನಸೊರೆಗೊಂಡರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ