Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ವಿವಿಧೆಡೆ ಕೆಂಪೇಗೌಡ ಸ್ತಬ್ಧಚಿತ್ರ ಮೆರವಣಿಗೆ

ನಾಡುಪ್ರಭು ಕೆಂಪೇಗೌಡ ಜಯಂತಿಯು ಇದೇ ಜೂ.27ರಂದು ನಡೆಯಲಿರುವ ಅಂಗವಾಗಿ ಮದ್ದೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೆಂಪೇಗೌಡ ಸ್ತಬ್ಧಚಿತ್ರ ಮೆರವಣಿಗೆ ನಡೆಸಲಾಯಿತು.

ಮದ್ದೂರು ತಾಲ್ಲೂಕಿನ ಚಾಮನಹಳ್ಳಿ, ನಗರಕೆರೆ, ಕೆ.ಬೆಳ್ಳೂರು, ಕೂಳಗೆರೆ, ಕ್ಯಾತಘಟ್ಟ ಗ್ರಾಮ ಪಂಚಾಯತಿಗಳಲ್ಲಿ ನಾಡಪ್ರಭು ಕೆಂಪೇಗೌಡ ಸ್ತಬ್ಧ ಚಿತ್ರಗಳ ಮೆರವಣಿಗೆ ಮಾಡಲಾಯಿತು.

ಮೆರವಣಿಗೆಯಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಯುವ ಅಧ್ಯಕ್ಷ ತಿಪ್ಪೂರು ಮನು, ಶಿವಲಿಂಗಗೌಡ, ನ ಲಿ ಕೃಷ್ಣ, ಕೆ ರವಿ ಕುಮಾರ್, ದಯಾನಂದ, ಉಮಾಶಂಕರ್, ಶ್ರೀಕ ಶ್ರೀನಿವಾಸ್, ಬಸವರಾಜು, ಸೋ ಸಿ ಪ್ರಕಾಶ್, ರವಿ, ಚನ್ನಸಂದ್ರ ಲಕ್ಷ್ಮಣ್ಣ, ಉಮೇಶ್  ಸೇರಿದಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಊರಿನ ಗ್ರಾಮಸ್ಥರು ಮುಖಂಡರು ಭಾಗವಹಿಸಿದದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ