Friday, November 20, 2026

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ | ಹೊಸ ಆನಂದೂರು ಬಳಿ ರಾಜಕಾಲುವೆ ಒತ್ತುವರಿ ; ಅಧಿಕಾರಿಗಳಿಂದ ಪರಿಶೀಲನೆ

ಶ್ರೀರಂಗಪಟ್ಟಣದ ತಾಲ್ಲೂಕಿನ ಹೊಸ ಆನಂದೂರು ಗ್ರಾಮದ ಬಳಿ ಕೆಲವು ವ್ಯಕ್ತಿಗಳು ರಾಜಕಾಲುವೆ ಒತ್ತುವರಿ ಮಾಡಿರುವ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಹಶೀಲ್ದಾರ್ ಅಶ್ವಿನಿ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.

ಸರ್ವೇ ನಂ 986ರ ಜಮೀನು ಖರೀದಿ ಮಾಡಿರುವ ಚೇತನ್ ಹಾಗೂ ಮುರುಳಿ ಎಂಬುವವರು, ತಾವು ಖರೀದಿ ಮಾಡಿದ ಜಮೀನಿನ ಜೊತೆಗೆ ಸಮೀಪದಲ್ಲೇ ಇರುವ ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿವೇಶನವನ್ನಾಗಿ ಮಾರ್ಪಡಿಸಿದ್ದಾರೆ ಎಂದು ಆರೋಪಿಸಿ ರೈತಸಂಘದ ಮುಖಂಡ ರಘು ಕಳೆದ ಏಪ್ರಿಲ್ 24ರಂದು ಸುದ್ದಿಗೋಷ್ಠಿ ನಡೆಸಿದ್ದರು, ಈ ಬಗ್ಗೆ ಮಾಧ್ಯಮಗಳಲ್ಲಿ ಈ ಕುರಿತು ವರದಿಗಳು ಪ್ರಕಟವಾಗಿದ್ದವು.

ಈ ಹಿನ್ನೆಲೆಯಲ್ಲಿ ಇಂದು ಶ್ರೀರಂಗಪಟ್ಟಣ ತಹಶೀಲ್ದಾರ್ ಅಶ್ವಿನಿ ನೇತೃತ್ವದಲ್ಲಿ ಬೆಳಗೊಳ ಗ್ರಾಮ ಲೆಕ್ಕಾಧಿಕಾರಿ ರಘು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು ಒತ್ತುವರಿಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೂಡಲೇ ಒತ್ತುವರಿದಾರರು ಒತ್ತುವರಿ ಸ್ಥಳದಲ್ಲಿ ತಮ್ಮ  ಉಪಯುಕ್ತ ವಸ್ತುಗಳೆನಾದರೂ ಇದ್ದರೆ ತೆರವು ಮಾಡಬೇಕು. ಇನ್ನೂ ಒಂದು ವಾರದಲ್ಲಿ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರೈತಸಂಘದ ಮುಖಂಡ ರಘು ನೀಡಿರುವ ದೂರಿನ ಸಾರಾಂಶ

ಶ್ರೀರಂಗಪಟ್ಟಣದ ತಾಲ್ಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ಸರ್ವೇ ನಂ 986ರ ಜಮೀನು ಖರೀದಿ ಮಾಡಿರುವ ಚೇತನ್ ಹಾಗೂ ಮುರುಳಿ ಎಂಬುವವರು ತಾವು ಖರೀದಿ ಮಾಡಿದ ಜಮೀನಿನ ಜೊತೆಗೆ ಸಮೀಪದಲ್ಲೇ ಇರುವ ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿವೇಶನವನ್ನಾಗಿ ಮಾರ್ಪಡಿಸಿದ್ದಾರೆ ಎಂದು ಆರೋಪಿಸಿದ್ದರು.

ಸುಮಾರು 10 ಎಕರೆಯಷ್ಟು ಉದ್ದವುಳ್ಳ ರಾಜ ಕಾಲುವೆ (ಪೂರ್ಣಪ್ರಸನ್ನ ನಾಲೆ)ಯನ್ನು ಮಣ್ಣಿನಿಂದ ಮುಚ್ಚಿ, ತಂತಿ ಬೇಲಿ ಹಾಕುವ ಮೂಲಕ ಸೈಟ್ (ನಿವೇಶನ) ಮಾಡುತ್ತಿದ್ದಾರೆ. ಈ ಬಗ್ಗೆ ಕೆ.ಆರ್.ಎಸ್ ಪೊಲೀಸ್‌ ಠಾಣೆಗೆ, ಬೆಳಗೊಳ ಗ್ರಾಮ ಪಂಚಾಯಿತಿ ಪಿಡಿಓಗೆ, ಉಪತಹಸಿಲ್ದಾರ (ನಾಡ ಕಚೇರಿ), ತಹಶಿಲ್ದಾ‌ರ್ ಸೇರಿದಂತೆ ಮಂಡ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದ್ದರು.

ದೂರು ನೀಡಿ ತಿಂಗಳು ಕಳೆದರೂ ಕೂಡ ಅಧಿಕಾರಿಗಳು ಸ್ಥಳ ಪರೀಶಿಲನೆ ಮಾಡಿ, ಕೆಲಸ ಮಾಡುತ್ತಿರುವುದನ್ನು ನಿಲ್ಲಿಸಿಲ್ಲ, ನಾನು ಹಲವಾರು ಬಾರಿ ತಹಶಿಲ್ದಾರ್ ಕಚೇರಿಗೆ ಹೋದರು ಕೂಡ ಪ್ರಯೋಜನವಾಗಲಿಲ್ಲ. ಯಾವ ಇಲಾಖೆಗೆ ಹೋದರೂ ಕೂಡ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಹಿಂಬರಹ ಕೂಡ ಕೊಟ್ಟಿದ್ದಾರೆ. ಹಾಗಾದರೆ ನಾವು ಯಾರ ಬಳಿ ಹೋಗಬೇಕೆಂದು ಪ್ರಶ್ನಿಸಿದರು. ಆದ್ದರಿಂದ ಮೇಲಾಧಿಕಾರಿಗಳು ರಾಜಕಾಲುವೆ ಒತ್ತುವರಿ ಮಾಡಿರುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ