ಮಂಡ್ಯದ ಗಾಂಧಿ ಭವನದಲ್ಲಿ ಕಲಾತಪಸ್ವಿ ಟ್ರಸ್ಟ್ ವತಿಯಿಂದ ಮಕ್ಕಳ ಪ್ರತಿಭಾ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಉಡುಗೆ ವೇಷಭೂಷಣ ಸ್ಪರ್ಧೆ ನಡೆಯಿತು.
ಟ್ರಸ್ಟ್ ನ ಮುಖ್ಯಸ್ಥ ಡಾ.ಇ.ಸಿ ನಿಂಗರಾಜಗೌಡ ಮಾತನಾಡಿ, ಮಕ್ಕಳು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಉತ್ತಮ ವೇದಿಕೆ ಕಲ್ಪಿಸುವುದು ಕಲಾತಪಸ್ವಿ ಟ್ರಸ್ಟ್ ಉದ್ದೇಶವಾಗಿದೆ ಎಂದರು.
ಮಕ್ಕಳಲ್ಲಿ ಏಕಾಗ್ರತೆ, ಸೃಜನಾತ್ಮಕ ಕಲೆ, ವಿಧ್ಯಾಭ್ಯಾಸ ದಲ್ಲಿ ಹೆಚ್ಚಿನ ಆಸಕ್ತಿ, ಪರಿಸರ ಪ್ರೇಮ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಕಲಾತಪಸ್ವಿ ಟ್ರಸ್ಟ್ ಮಾಡುತ್ತಾ ಬಂದಿದೆ. ಮಕ್ಕಳು ವೇಷಭೂಷಣ ಹಾಗೂ ಇನ್ನಿತರ ಸ್ಪರ್ಧೆಗಳಲ್ಲಿ ಭಾಗವಹಿಸಲು ಮೂಲ ಕಾರಣ ಅವರ ಪೋಷಕರಾಗಿದ್ದಾರೆ. ಪೋಷಕರು ಮಕ್ಕಳ ಪ್ರತಿಭೆಗಳನ್ನು ಹೊರತಂದು ಅವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವಲ್ಲಿ ಸಹಕಾರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಿಮಾ ಶ್ರೀ, ಅನಿಲ್ ಕುಮಾರ್, ಲೋಹಿತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




