Thursday, November 19, 2026

ಪ್ರಾಯೋಗಿಕ ಆವೃತ್ತಿ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚಿದ ಅಪಘಾತ | ಪರಿಶೀಲನೆ ನಡೆಸಿದ ಎಡಿಜಿಪಿ ಅಲೋಕ್‌ಕುಮಾರ್

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಿಪರೀತವಾಗಿ ಅಪಘಾತಗಳು ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಮನಗರ ಹಾಗೂ ಮಂಡ್ಯ ಜಿಲ್ಲಾ ವ್ಯಾಪ್ತಿಯ ಹೆದ್ದಾರಿಯನ್ನು ರಾಜ್ಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ಶುಕ್ರವಾರ ಪರಿಶೀಲನೆ ನಡೆಸಿದರು.

ಮದ್ದೂರು ತಾಲೂಕಿನ ನಿಡಘಟ್ಟದಿಂದ ಶ್ರೀರಂಗಪಟ್ಟಣ-ಮೈಸೂರು ಗಡಿಭಾಗದವರೆಗೂ ಭೇಟಿ ನೀಡಿದ ಅವರು, ಅಪಘಾತ ವಲಯ ಹಾಗೂ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿ ಅಪಘಾತಕ್ಕೆ ಕಾರಣ, ಹೆದ್ದಾರಿಯ ಲೋಪದೋಷಗಳು, ನ್ಯೂನತೆ ಬಗ್ಗೆ ಸಾರ್ವಜನಿಕರಿಂದ ಹಾಗೂ ವಾಹನ ಸವಾರರಿಂದ ಸಮಸ್ಯೆಗಳ ಬಗ್ಗೆVerification ಮಾಹಿತಿ ಕಲೆ ಹಾಕಿದರು. ಕೆಲವು ಕಡೆ ಸ್ಥಳೀಯರು ದೂರು, ಅಹವಾಲು ಸಲ್ಲಿಸಿದರು.

nudikarnataka.com

ಹೆದ್ದಾರಿಯು ಸಂಪೂರ್ಣ ಅವೈಜ್ಞಾನಿಕ

ಎಡಿಜಿಪಿ ಅಲೋಕ್‌ಕುಮಾರ್ ಪರಿಶೀಲನೆ ಸಂದರ್ಭದಲ್ಲಿ ವಾಹನ ಸವಾರರು, ಸ್ಥಳೀಯರು ದೂರುಗಳ ಸರಮಾಲೆಯನ್ನೇ ಮುಂದಿಟ್ಟರು. ಹೆದ್ದಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಸಮರ್ಪಕವಾಗಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಿಲ್ಲ. ಚರಂಡಿ ವ್ಯವಸ್ಥೆ ಇಲ್ಲ. ಬೇಡದ ಸ್ಥಳಗಳಲ್ಲಿ ರಸ್ತೆ ಉಬ್ಬು ಹಾಕಿದ್ದು, ಬೇಕಾದ ಕಡೆ ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದ ಪ್ರಯಾಣಿಕರು, ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಅಲ್ಲದೆ, ಸರ್ವೀಸ್ ರಸ್ತೆಯ ಪಕ್ಕದಲ್ಲಿಯೇ ಮಣ್ಣು, ಕಲ್ಲು ಹಾಕಿರುವುದರಿಂದ ವಾಹನ ಸವಾರರಿಗೆ ರಾತ್ರಿ ವೇಳೆ ತೊಂದರೆಯಾಗುತ್ತಿದೆ. ವೇಗ ನಿಯಂತ್ರಣ ಕುರಿತು ನಾಮಫಲಕಗಳ ಅಳವಡಿಸಿಲ್ಲ. ಹೆದ್ದಾರಿ ಪ್ರವೇಶ, ನಿರ್ಗಮನದ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲದಂತಾಗಿದೆ ಎಂದು ಹಲವಾರು ಸಮಸ್ಯೆಗಳನ್ನು ಅನಾವರಣಗೊಳಿಸಿದರು.

ಸೌಲಭ್ಯಗಳ ಕೊರತೆ

ವಾಹನಗಳ ಸವಾರರು ಸಂಚಾರಿ ನಿಯಮ ಪಾಲನೆಗೆ ನಿಯಮ ಫಲಕಗಳನ್ನು ಅಳವಡಿಸಿಲ್ಲ. ಲೈನ್‌ಕ್ರಾಸ್ ಮಾಡದಂತೆ ಸಂಚರಿಸುವ ಬಗ್ಗೆ ಅರಿವು ಮೂಡಿಸಿಲ್ಲ. ಅಪಘಾತವಾದರೆ ಮಾಹಿತಿ ನೀಡಲು ಸಹಾಯವಾಣಿ ಇಲ್ಲ. ತುರ್ತು ಆರೋಗ್ಯ ಸೇವೆ, ಅಪಘಾತವಾದ ವಾಹನಗಳ ಸ್ಥಳಾಂತರಕ್ಕೆ ಟೋಯಿಂಗ್, ಹೆದ್ದಾರಿ ಗಸ್ತು, ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದಂತಾಗಿದೆ. ಇದರ ಬಗ್ಗೆ ಹಲವಾರು ಬಾರಿ ದೂರು ಮನವಿ ಮಾಡಿದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಸೇರಿದಂತೆ ಅಧಿಕಾರಿಗಳು ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ