ಉತ್ತರ ಕರ್ನಾಟಕದ ಸಸ್ಯಕಾಶಿ ಗದಗದ ಕಪ್ಪತ್ತಗುಡ್ಡವನ್ನು ಸಂರಕ್ಷಿಸಲು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಣೆ ಮಾಡಿರುವುದನ್ನು ಕದಂಬ ಸೈನ್ಯದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಸ್ವಾಗತಿಸಿದ್ದಾರೆ.
ಕಪ್ಪತಗುಡ್ಡ ಸಂರಕ್ಷಣೆ ಮಾಡುವಂತೆ ಆಗ್ರಹಿಸಿ ಹಿಂದಿನಿಂದಲೂ ಕದಂಬ ಸೈನ್ಯ ಹೋರಾಟ ಮಾಡಿಕೊಂಡು ಬಂದಿತ್ತು, ಅಲ್ಲದೇ ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನು ಮಾಡಿತ್ತು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕಪ್ಪತಗುಡ್ಡ ಅಭಿವೃದ್ದಿ ಪ್ರಾಧಿಕಾರ ರಚನೆಗೆ ಮುಂದಾಗಿರುವುದು ಸಂತಸ ತಂದಿದೆ ಎಂದು ಬ್ರೇಕಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಈ ನಿರ್ಧಾರವನ್ನು ರಾಜ್ಯ ಉಪಾಧ್ಯಕ್ಷ ದೇವನಹಳ್ಳಿ ದೇವರಾಜ್, ರಾಜ್ಯ ಕಾರ್ಯದರ್ಶಿ ಎನ್ ಸಿ ಕಾಂಬಳೆ ವಿಜಯಪುರ,ರಾಜ್ಯ ಸಂಚಾಲಕ ಶಿವಕುಮಾರ್, ರಾಜ್ಯ ಸಹ ಕಾರ್ಯದರ್ಶಿಗಳಾದ ಗವಿಶಿದ್ದಯ್ಯ ಹಳ್ಳಿಕೇರಿ ಮಠ ಮುಂಡರಗಿ, ಉಮ್ಮಡಹಳ್ಳಿ ನಾಗೇಶ್ ಮತ್ತಿತರರು ಸ್ವಾಗತಿಸಿದ್ದಾರೆ.




