ಪ್ರತಿಯೊಬ್ಬರು ಮಾಲಿನ್ಯದಿಂದ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ದೂರ ಮಾಡಲು ಗಿಡಗಳನ್ನು ನೆಟ್ಟು ಪೋಷಿಸಬೇಕು. ಗಿಡಗಳನ್ನು ನೆಡುವುದರಿಂದ ಉತ್ತಮ ಪರಿಸರ ನಿರ್ಮಾಣಗೊಳ್ಳುತ್ತದೆ ಎಂದು ಸುಧಾಮೂರ್ತಿ ನಗರ ಮತ್ತು ಗ್ರಾಮೀಣಾಭಿವೃದ್ದಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷೆ ವಸಂತ ತಿಳಿಸಿದರು.
ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಕಡಿಲುವಾಗಿಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮದ ಯುವ ಮುಖಂಡರಾದ ಶಿವರಾಮು ಮತ್ತು ಕೆ.ಎಂ.ಭರತ್ ಅವರ ನೇತೃತ್ವದಲ್ಲಿ 100 ಕ್ಕೂ ಹೆಚ್ಚು ಗಿಡಗಳನ್ನು ನೆಡುವ ವನ ಮಹೋತ್ಸವ ಕಾಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಸಂರಕ್ಷಣೆಗೆ ಮಕ್ಕಳಿಂದ ಹಿಡಿದು ವಯೋವೃದ್ದದ ವರೆವಿಗೂ ಮರಗಳನ್ನು ಬೆಳೆಸಲು ಮುಂದಾಗಬೇಕಿದೆ. ಪ್ರಸ್ತುತ ದಿನದಲ್ಲಿ ಅರಣ್ಯ ಸಂಪತ್ತನ್ನು ನಾಶಗೊಳಿಸಿದ್ದರಿಂದ ಇಂದು ನಾವು ಪಶ್ಚಾತಾಪ ಪಡುವಂತ ಪರಿಸ್ಥಿತಿ ಎದುರಾಗಿದೆ. ಮಾನವನ ಆರೋಗ್ಯಕ್ಕೆ ಪರಿಸರ ಅತ್ಯಗತ್ಯ, ಗಿಡಮರಗಳಿಂದ ನಮಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಸಿಗುತ್ತದೆ. ಈ ಕಾರಣಕ್ಕಾದರೂ ನಾವು ಹೆಚ್ಚುಹೆಚ್ಚಾಗಿ ಗಿಡಮರಗಳನ್ನು ಬೆಳೆಬೇಕೆಂದರು.
ಸಬ್ಇನ್ಸ್ಪೆಕ್ಟರ್ ಭೀಮಪ್ಪ ಸಿದ್ದಪ್ಪ ಬಾನಾಸಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ನಾಗರೀಕರು ವಿವಿಧ ಬಗೆಯ ಸಸಿಗಳನ್ನು ಬೆಳೆಸುವ ಮೂಲಕ ಬದುಕಿನಲ್ಲಿ ಖುಷಿ ಕಾಣಬೇಕೆಂದರು. ಉತ್ತಮ ಪರಿಸರದಿಂದ ಮಾತ್ರ ನೆಮ್ಮದಿಯ ಜೀವನ ನೆಡೆಸಲು ಸಾಧ್ಯ. ಸಕಲ ಜೀವರಾಶಿಗಳು ಪರಿಸರವನ್ನು ಅವಲಂಬಿಸಿವೆ. ಸಸ್ಯ ರಾಶಿಯಿಂದ ಪ್ರತಿಯೊಂದು ಜೀವಿಯು ಭೂಮಿ ಮೇಲೆ ಬದುಕಲು ಸಾಧ್ಯ. ಪ್ರತಿಯೊಬ್ಬರು ಪರಿಸರವನ್ನು ಉಳಿಸುವ ಮತ್ತು ಬೆಳೆಸುವ ಬಗ್ಗೆ ಚಿಂತನೆ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ 100 ಕ್ಕೂ ಹೆಚ್ಚು ಗಿಡಗಳನ್ನು ಗ್ರಾಮದ ಯುವ ಮುಖಂಡರಾದ ಶಿವರಾಮು ಮತ್ತು ಕೆ.ಎಂ.ಭರತ್ ಅವರ ನೇತೃತ್ವದಲ್ಲಿ ನೆಡಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಪುಟ್ಟಸ್ವಾಮೀಗೌಡ, ಗ್ರಾ.ಪಂ ಅಧ್ಯಕ್ಷ ಮಹೇಶ್, ಸದಸ್ಯರಾದ ಮಂಚಶೆಟ್ಟಿ, ದೇವಿರಮ್ಮ, ದೇವಮ್ಮ, ರಕ್ಷಿತ್ ಕುಮಾರ್, ಎಸ್.ಡಿ.ಎಂಸಿ ಅಧ್ಯಕ್ಷ ಸಣ್ಣೇಗೌಡ, ಮುಖ್ಯಶಿಕ್ಷಕ ಬೊಮ್ಮರಾಜು, ಶಿಕ್ಷಕರಾದ ಕೆ.ಆರ್.ಗಣೇಶ್, ನಾರಾಯಣಸ್ವಾಮಿ, ಕೆ.ಪಿ.ಮಂಚೇಗೌಡ, ರಮ್ಯ, ಪಟೇಲ್ ಲಕ್ಷ್ಮೇಗೌಡ, ವಿಜಯಕುಮಾರ್, ಮಾದರಹಳ್ಳಿ ಕೃಷ್ಣ ಸೇರಿದಂತೆ ಇತರರಿದ್ದರು.




