Friday, November 20, 2026

ಪ್ರಾಯೋಗಿಕ ಆವೃತ್ತಿ

“ಎಲ್ಲವೂ ಮೋದಿಯಿಂದ“ ಎನ್ನುವ ಬಿಜೆಪಿಯ ಅಹಂ ಮಣ್ಣು ಪಾಲಾಗಲಿದೆ – ಕಾಂಗ್ರೆಸ್

ಜಾತ್ಯತೀತ ತತ್ವದ ಪಕ್ಷಗಳ INDIA ಒಕ್ಕೂಟವು ಸಭೆ ನಡೆಸಿದ ಬೆನ್ನಲ್ಲೇ ಬೆದರಿ ಹೋದ ಬಿಜೆಪಿ ನೇತೃತ್ವದಲ್ಲಿ 36 ಪಕ್ಷಗಳ NDA ಸಭೆ ನಡೆಸಿದೆಯಂತೆ, ಇದು ಬಿಜೆಪಿಯ ಸೋಲಿನ ಆತಂಕವನ್ನು, ಕುಸಿದು ಹೋದ ಮೋದಿಯ ಇಮೇಜ್ ನ್ನು, ಬಿಜೆಪಿ ಮೇಲಿನ ಜನವಿರೋಧವನ್ನು ಸೂಚಿಸುತ್ತದೆ. “ಎಲ್ಲವೂ ಮೋದಿಯಿಂದ“ ಎನ್ನುವ ಬಿಜೆಪಿಯ ಅಹಂ ಮಣ್ಣುಪಾಲಾಗಲಿದೆ ಎಂದು ಕಾಂಗ್ರೆಸ್ ಪಕ್ಷವು ಟೀಕಿಸಿದೆ.

Indian National Developmental Inclusive Alliance ಈ ಒಗ್ಗಟ್ಟು ಭಾರತದ ಗೌರವವನ್ನು ಎತ್ತಿ ಹಿಡಿಯಲ್ಲಿಕ್ಕಾಗಿ, ಪ್ರಜಾಪ್ರಭುತ್ವವನ್ನು ಸಾರ್ವಧಿಕಾರದಿಂದ ಮುಕ್ತಗೊಳಿಸುವುದಕ್ಕಾಗಿ, ಸಂವಿಧಾನವನ್ನು ಉಳಿಸಲಿಕ್ಕಾಗಿ, ದೇಶದ ಜನರ ಹಿತಕ್ಕಾಗಿ, ದ್ವೇಷವನ್ನು, ವಿಭಜನೆಯನ್ನು ತೊಲಗಿಸುವುದಕ್ಕಾಗಿ, ಸದೃಢ ಭಾರತದ ನಿರ್ಮಾಣಕ್ಕಾಗಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ