Tuesday, November 24, 2026

ಪ್ರಾಯೋಗಿಕ ಆವೃತ್ತಿ

ಭೈರತಿ ಸುರೇಶ್ ಹುಟ್ಟುಹಬ್ಬ ; ಗರ್ಭಿಣಿ-ಬಾಣಂತಿಯರಿಗೆ ಅನ್ನಸಂತರ್ಪಣೆ

ಮಂಡ್ಯದ ಜಿಲ್ಲಾಸ್ಪತ್ರೆಯ ಹೆರಿಗೆವಾರ್ಡ್ ಬಳಿ ಇರುವ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಭೈರತಿ ಸುರೇಶ್ ಅಭಿಮಾನಿಗಳ ಬಳಗ ಆಯೋಜಿಸಿದ್ದ ನಗರ ಅಭಿವೃದ್ದಿ ಹಾಗೂ ನಗರ ಯೋಜನೆ ಸಚಿವ ಭೈರತಿ ಸುರೇಶ್ ಜನ್ಮದಿನ ಪ್ರಯುಕ್ತ ವಿವಿಧ ಸೇವಾಕಾರ್ಯ ಮತ್ತು ಗರ್ಭಿಣಿ-ಬಾಣಂತಿಯರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಮಂಡ್ಯ ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಸಾತನೂರು ಮಹೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮ ಶಿಷ್ಯ ಭೈರತಿ ಸುರೇಶ್ ಅವರು ರಾಜ್ಯದ ಸಚಿವ ಸಂಪುಟದಲ್ಲಿ ನಗರ ಅಭಿವೃದ್ದಿ ಹಾಗೂ ನಗರ ಯೋಜನೆ ಸಚಿವರಾಗಿ ಉತ್ತಮ ಕಾರ್ಯ, ಜನಪರ ಯೋಜನಗಳನ್ನು ಜಾರಿ ಮಾಡಿ ಅಭಿವೃದ್ದಿಕಾರಾಗಿ ಹೊರಹೊಮ್ಮುತ್ತಿದ್ದಾರೆ ಎಂದು ನುಡಿದರು.

ಕುರುಬ ಸಮಾಜದ 2ನೇ ಹಂತದ ನಾಯಕರಾಗಿರುವ ಭೈರತಿ ಸುರೇಶ್ ಅವರು, ಹಲವಾರು ವರ್ಷಗಳಿಂದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ನಂತರದ ದಿನಗಳಲ್ಲಿ ಎಂ.ಎಲ್.ಸಿ, ಎಂಎಲ್‌ಎ ಆಗಿ ಈಗ ನಗರ ಅಭಿವೃದ್ದಿ ಹಾಗೂ ನಗರ ಯೋಜನೆ ಸಚಿವರಾಗಿ ಜನಸೇವೆ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಸಚಿವರ ಜನ್ಮದಿನ ನಾಳೆ ಇರುವುದರಿಂದ ವಿವಿಧ ಸೇವಾಕಾರ್ಯಗಳು ಬೆಂಗಳೂರಿನಲ್ಲಿ ಅಭಿಮಾನಿಗಳು ಆಯೋಜಿಸಿದ್ದು ನಾವು ಅಲ್ಲಿಗೆ ತರಳುವುದರಿಂದ  ಒಂದು ದಿನ ಮುಂಚಿತವಾಗಿಯೇ ಮಂಡ್ಯ ತಾಲೂಕು ಮತ್ತು ನಗರದಲ್ಲಿನ ವಿದ್ಯಾಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ, ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಗರ್ಭಿಣಿ ಮತ್ತು ಬಾಣಂತಿ ಹಾಗೂ ಅಗತ್ಯ ಉಳ್ಳವರಿಗೆ ಪೌಷ್ಠಿಕಾಹಾರ ವಿತರಣೆ ಕಾರ್ಯ ಸಲ್ಲಿಸಿದ್ದೇವೆ ಎಂದರು.
ಮಂಡ್ಯ ತಾಲೂಕಿನ ಸಾತನೂರು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ, ಮದ್ದೂರು ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕೆಎಎಸ್, ಐಎಎಸ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲಕರವಾಗುವ ಪುಸ್ತಕಗಳನ್ನು ನೀಡುತ್ತಿದ್ದೇವೆ, ಸುಮಾರು 150 ವಿದ್ಯಾರ್ಥಿನಿಯರಿಗೆ ವಿತರಣೆ ಮಾಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರ ಮುಖ್ಯಸ್ಥ ಯೋಗೇ ಶ್‌ಮಂಗಲ, ಬಂಡೂರು ಮಂಜು, ಡಿ.ಎನ್.ನಾಗರಾಜು, ಸುರೇಶ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ