ಮಂಡ್ಯನಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಬಡವರಿಗೆ ನಿವೇಶನ ಹಂಚಿಕೆ ಮಾಡಿ, ಮನೆ ನಿರ್ಮಾಣಕ್ಕೆ ಸಹಾಯಧನ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ವಿವಿಧ ಬಡಾವಣೆಗಳ ನಿವಾಸಿಗಳು ಗುರುವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ನಗರಸಭೆ ಎದುರು ಜಮಾಯಿಸಿ ಧರಣಿ ನಡೆಸಿದ ನಿವಾಸಿಗಳು, ಬಡಜನತೆಗೆ ನಿವೇಶನ, ವಸತಿ, ಹಕ್ಕುಪತ್ರ ಮತ್ತು ಮೂಲಸೌಕರ್ಯ ಒದಗಿಸಬೇಕು. ಬಡ ಜನರ ಸಂಕಷ್ಟಕ್ಕೆ ನಗರಸಭೆ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಮಂಡ್ಯ ನಗರದ ಎಸ್ ಡಿ ಜಯರಾಮ್ ಬಡಾವಣಿ, ಬೀಡಿ ಕಾಲೋನಿ, ಗಾಂಧಿನಗರ, ಹಾಲಹಳ್ಳಿ, ನಾಲಬಂದವಾಡಿ ಯಲ್ಲಿವಾಸಿಸುತ್ತಿರುವ ಜನರು ಹಕ್ಕುಪತ್ರಕ್ಕಾಗಿ 94 ಸಿ ಸಿ ಅಡಿಯಲ್ಲಿ ಅರ್ಜಿ ಹಾಕಿದ್ದಾರೆ ಅವರಿಗೆ ಹಕ್ಕು ಪತ್ರ ನೀಡಿ, ಮೂಲಭೂತ ಸೌಕರ್ಯ ಕಲ್ಪಿಸಬೇಕು. ನಗರ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಇವರಿಗೆ ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ಧನಸಹಾಯ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ ಮಟ್ಟಮಾದು, ಸಿಐಟಿಯು ನಾಯಕಿ ಸಿ.ಕುಮಾರಿ, ಮುಖಂಡರಾದ ಆರ್.ರಾಜು, ಸಂತೋಷ ಎಂ. ಎಸ್ಜ.ರೀನಾ,ಆರುಣ್ ಕುಮಾರ್,ಪಿ ಹನುಮೇಶ್, ಪ್ರೇಮ ಬೂದನೂರು, ಅಬ್ದುಲ್ಲ, ಮಂಜುಳಾ ನೇತೃತ್ವ ವಹಿಸಿದ್ದರು.




