Tuesday, November 24, 2026

ಪ್ರಾಯೋಗಿಕ ಆವೃತ್ತಿ

ದಲಿತ ಬಾಲಕಿ ಮೇಲೆ ಸಂಘ ಪರಿವಾರದವರ ಅತ್ಯಾಚಾರ; ಶೋಭಾ ಕರಂದ್ಲಾಜೆ ಮೌನಕ್ಕೆ ಕಾಂಗ್ರೆಸ್ ಕಿಡಿ

ಉಡುಪಿಯಲ್ಲಿ ಇಲಿಯನ್ನು ಹುಲಿ ಮಾಡಲು ಹೊರಟಿರುವ ಬಿಜೆಪಿ ನಾಯಕರಿಗೆ ಅದೇ ಕರಾವಳಿಯ ವಿಟ್ಲದಲ್ಲಿ ಸಂಘ ಪರಿವಾರದವರಿಂದ ನಿರಂತರ ಅತ್ಯಾಚಾರಕ್ಕೆ ಒಳಪಟ್ಟ ದಲಿತ ಬಾಲಕಿಯ ಬಗ್ಗೆ ಮೌನವೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“>

ಉಡುಪಿ ಶೌಚಾಲಯದ ವಿಚಾರವನ್ನೇ ದೊಡ್ಡದು ಮಾಡುವ ಬಿಜೆಪಿ ಮುಖಂಡರು, ಈಗ ಎಲ್ಲಿಗೆ ಹೋಗಿದ್ದಾರೆ ? ಆ ದಲಿತ ಬಾಲಕಿ ಹಿಂದೂ ಅಲ್ಲವೇ? ಬಿಜೆಪಿಗೆ ನಂಟಿರುವವರು ನಡೆಸುವ ಅತ್ಯಾಚಾರ ಅನಾಚಾರಗಳಿಗೆ ಬಿಜೆಪಿಯ ಸಮ್ಮತಿ ಇದೆಯೇ? ಅಥವಾ ದಲಿತ ಹೆಣ್ಣುಮಗಳು ಎಂಬ ಕಾರಣಕ್ಕೆ ಅಸಡ್ಡೆಯೇ? ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರ ಬಾಯಿಯನ್ನು ಈಗ ಅದುಮಿ ಹಿಡಿದವರು ಯಾರು? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ