Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರಾಷ್ಟ್ರೀಯ ಚೆಸ್‌ ಪಂದ್ಯಾವಳಿಗೆ ಜ್ಞಾನವಿ ಆಯ್ಕೆ

ಮಂಡ್ಯ ರಾಯಲ್ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಜ್ಞಾನವಿ ಎಂ.ಎಸ್ ಕರ್ನಾಟಕ ರೀಜಿಯನಲ್ ಚೆಸ್ ಚಾಂಪಿಯನ್ಶಿಪ್ ನಲ್ಲಿ 14 ವರ್ಷದ ಬಾಲಕಿಯರ ವಿಭಾಗದಲ್ಲಿ 5ನೇಯ ಸ್ಥಾನ ಪಡೆದು (ಸಿ.ಐ.ಎಸ್‌.ಐ, ಕರ್ನಾಟಕ ಬೋರ್ಡ್‌) ರಾಷ್ಟ್ರೀಯ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆರಂದು ಅಕಾಡೆಮಿಯ ತರಬೇತುದಾರ ಚೇತನ್ ಎಂ.ಎಸ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜು.21 ಹಾಗೂ 22ರಂದು ಬೆಂಗಳೂರಿನ ಗಂಗಾ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ಚೆಸ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ 9ನೇ ಸುತ್ತಿನಲ್ಲಿ 7 ಅಂಕ ಪಡೆದು ರಾಷ್ಟ್ರೀಯ ಚೆಸ್‌ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಜ್ಞಾನವಿ ಎಂ.ಎಸ್. ಮಂಡ್ಯದ ಸ್ಯಾಂತೋಮ್ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಚೆಸ್ ಪಟು ಜ್ಞಾನವಿ ಮಾತನಾಡಿ, ತರಬೇತುದಾರ ಚೇತನ್ ಅವರ ಮಾರ್ಗದರ್ಶನದಿಂದ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲು ಸಾಧ್ಯವಾಗಿದೆ, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿಗಳಿಗೆ ಆಯ್ಕೆಯಾಗುವುದು ನನ್ನ ಗುರಿಯಾಗಿದೆ, ಅದಕ್ಕಾಗಿ ಸಿದ್ದತೆ ನಡೆಸುತ್ತೇನೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ