ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯತ್ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ
ಪಿ.ಎಂ.ಆನಂದ್ ಚುನಾಯಿತರಾದರೆ, ಉಪಾಧ್ಯಕ್ಷರಾಗಿ ಜಿ.ಆರ್.ಗೀತಾ ಅವರು ಲಾಟರಿ ಮೂಲಕ ಆಯ್ಕೆಯಾದರು.
ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ಎಂ.ಆನಂದ್ ಹಾಗೂ ಕೆ.ಎಸ್. ಮಂಜು ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಆನಂದ್ ಅವರಿಗೆ 12 ಮತಗಳು, ಕೆ.ಎಸ್.ಮಂಜು ಅವರಿಗೆ 10 ಮತಗಳು ಲಭಿಸಿದವು.
ಉಪಾಧ್ಯಕ್ಷೆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜಿ.ಆರ್.ಗೀತಾ ಹಾಗೂ ಜಯಮ್ಮ ಅವರು ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ಜಿ.ಆರ್.ಗೀತಾ ಹಾಗೂ ಜಯಮ್ಮ ಅವರು ತಲಾ 11 ಮತಗಳ ಪಡೆಯುವ ಮೂಲಕ ಸಮಬಲ ಸಾಧಿಸಿದರು. ನಂತರ ಜಿ.ಆರ್.ಗೀತಾ ಅವರು ಲಾಟರಿ ಮೂಲಕ ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿಯಾದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಎನ್.ಸಿ.ಶಶಿಧರ್ ಅವರು ಇವರ ಆಯ್ಕೆಯನ್ನು ಪ್ರಕಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎಸ್. ಮಧುಕರ್, ಕಲಾವತಿ, ಪ್ರಶೀಲಾ, ನಿರ್ಮಲ, ಜಯಮ್ಮ, ಪ್ರೇಮ, ಶಿವಮ್ಮ,ಮಮತಾ, ನಂದಿನಿ , ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್, ಕಾರ್ಯದರ್ಶಿ ಚೌಡಯ್ಯ ಇತರರು ಹಾಜರಿದ್ದರು.




