Friday, November 20, 2026

ಪ್ರಾಯೋಗಿಕ ಆವೃತ್ತಿ

ಜನರು ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಗಮನಿಸುತ್ತಿದ್ದಾರೆ: ಡಿ.ಸಿ.ತಮ್ಮಣ್ಣ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ರಾಜ್ಯದ ಜನರು ಗಮನಿಸುತ್ತಿದ್ದು, ದುರಾಡಳಿತವನ್ನು ನಾವು ಎತ್ತಿ ಹಿಡಿಯಲು ಮುಂದಾದರೆ ರಾಜಕೀಯ ಬಣ್ಣ ಕಟ್ಟಲಾಗುತ್ತಿದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕಿಡಿಕಾರಿದರು.

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ದೊಡ್ಡರಸಿನಕೆರೆ ಗ್ರಾ.ಪಂಗೆ ನೂತನ ಅಧ್ಯಕ್ಷರಾಗಿ ಮಂಚೇಗೌಡ, ಉಪಾಧ್ಯಕ್ಷರಾಗಿ ಸವಿತ ಜಯರಾಮು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದರು.

ವಿನಾಕಾರಣ ಟೀಕೆ ಟಿಪ್ಪಣಿಗಳನ್ನು ಮಾಡುವುದು ಬೇಡ, ಸ್ವಲ್ಪ ದಿನಗಳ ವರೆಗೆ ಕಾದುನೋಡೋಣ, ನಾವು ಈ ಸಮಯದಲ್ಲಿ ಏನೇ ಮಾತನಾಡಿದರೂ ಯಾರನ್ನೋ ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂಬ ಭಾವನೆ ಜನರ ಮನಸ್ಸಿನಲಿ ಮೂಡುತ್ತದೆ. ಹಾಗಾಗಿ ಸರ್ಕಾರ ರದ ಸರಿತಪ್ಪುಗಳನ್ನು ಜನರ ನಿರ್ಧಾರಕ್ಕೆ ಬಿಡೋಣ ಎಂದರು.

ಅಭಿವೃದ್ದಿ ವಿಷಯದಲ್ಲಿ ಏನೇನು ಮಾಡುತ್ತಾರೆಂಬುವುದನ್ನು ಕಾಲಾವಕಾಶ ಕೊಟ್ಟು ನೋಡೋಣ, ಸದ್ಯದ  ಪರಿಸ್ಥಿತಿಯಲ್ಲಿ ನಾವು ಸತ್ಯ ಹೇಳಿದರೂ ಅದನ್ನು ಯಾರೂ ನಂಬುವುದಿಲ್ಲ. ನಾವು ಏನೇ ಸತ್ಯಹೇಳಿದರೂ ಯಾರನ್ನೋ ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆಂದು ನಮ್ಮ ಮೇಲೆಯೇ ಆರೋಪ ಮಾಡುತ್ತಾರೆ. ಹಾಗಾಗಿ ಸ್ವಲ್ಪ ಅವಧಿಯವರೆಗೆ ಶಾಸಕರ ಕಾರ್ಯವೈಖರಿ ಹಾಗೂ ಸರ್ಕಾರದ ಆಡಳಿತ ಶೈಲಿಯನ್ನು ಗಮನಿಸಿ ನಂತರದಲ್ಲಿ ತಪ್ಪುಗಳು ಕಂಡು ಬಂದರೆ ಚಾಟಿ ಬಿಸೋಣ ಎಂದು ಪಕ್ಷದ ಮುಖಂಡರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ,ಪಂ ಸದಸ್ಯರಾದ ಡಿ.ಎಸ್.ಶರತ್, ಚಂದ್ರಶೇಖರ್, ಶಿವಲಿಂಗಯ್ಯ, ಶ್ರೀನಿವಾಸ್, ಶಬೀನಭಾನು, ಕೃಪ, ಪುಟ್ಟಸ್ವಾಮಿ, ದಿವ್ಯ, ಸೌಮ್ಯ, ಹೊನ್ನೇಗೌಡ, ಸುನಂದಮ್ಮ, ಸುರೇಶ್, ಮಹೇಶ್, ಲತಾ, ಯತೀಶ್, ವೀಣಾ, ಸುರೇಶ್, ಮುಖಂಡರಾದ ಎಂ.ಚಿಕ್ಕಹುಚ್ಚೇಗೌಡ, ಕೇಬಲ್ ಆನಂದ್, ಮಹೇಶ್, ಪ್ರದೀಪ್, ಮುಟ್ಟನಹಳ್ಳಿ ಶಿವಲಿಂಗಯ್ಯ, ಯು.ಡಿ.ಚಂದ್ರಶೇಖರ್, ರಮೇಶ್ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ