Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಅಲೂರು ಗ್ರಾ.ಪಂ. ಜಾ.ದಳ ಬೆಂಬಲಿತರ ಪಾಲು

ವರದಿ: ಪ್ರಭು ವಿ ಎಸ್

ಮದ್ದೂರು ತಾಲೂಕಿನ ಆಲೂರು ಗ್ರಾಮ ಪಂಚಾಯಿತಿಯಲ್ಲಿ 2 ನೇ ಅವಧಿಗೆ ನಡೆದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ತಾಯಮ್ಮ ಹಾಗೂ ಉಪಾಧ್ಯಕ್ಷರಾಗಿ ನಾಗೇಶಚಾರಿ ಶುಕ್ರವಾರ ಆಯ್ಕೆಯಾದರು.

ನಾಮಪತ್ರ ಸಲ್ಲಿಸುವ ಕಾಲಕ್ಕೆ ಅಧ್ಯಕ್ಷ ಸ್ಥಾನ ಬಯಸಿ ತಾಯಮ್ಮ ಹಾಗೂ ಸುನಂದಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ನಾಗೇಶಚಾರಿ ಹಾಗೂ ರಾಘವೇಂದ್ರ ಅವರು ಚುನಾವಣಾಧಿಕಾರಿ ಪರಮೇಶ್ ಅವರಿಗೆ ಉಮೇದುವಾರಿಕೆ ಸಲ್ಲಿಸಿದ್ದರು.

ಬಳಿಕ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಗೌಪ್ಯ ಮತದಾನ ನಡೆದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ತಾಯಮ್ಮ ಅವರು 9 ಮತಗಳನ್ನು ಪಡೆದು ಗೆಲುವು ಪಡೆದರೆ, ಪ್ರತಿಸ್ಪರ್ಧಿ ಸುನಂದಮ್ಮ 7 ಮತಗಳನ್ನು ಪಡೆದು ಸೋಲಿನ ರುಚಿ ಕಂಡರು. ಇನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ನಾಗೇಶಚಾರಿ 9 ಮತಗಳನ್ನು ಪಡೆದು ವಿಜಯಿಯಾದರೆ, ಪ್ರತಿಸ್ಪರ್ಧಿ ಕೆ ಸಿ ರಾಘವೇಂದ್ರ 7 ಮತಗಳನ್ನು ಪಡೆದುಕೊಂಡು ಪರಾಭವಗೊಂಡರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಗ್ರಾಮಸ್ಥರು ಕಾರ್ಯಕರ್ತರು ಪುಷ್ಪ ಮಾಲೆ ಅರ್ಪಿಸಿ, ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜಾಹೀರಾತು

ಇದೇ ವೇಳೆ ನೂತನ ಅಧ್ಯಕ್ಷೆ ತಾಯಮ್ಮ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಬೆಂಬಲ ಸೂಚಿಸಿ ಮತದಾನ ಮಾಡಿದ ಎಲ್ಲಾ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು. 30 ತಿಂಗಳ ಅವಧಿಯಲ್ಲಿ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪಗಳ ವ್ಯವಸ್ಥೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣಾ ವೇಳೆ ಮಾಜಿ ಅಧ್ಯಕ್ಷರಾದ ಉದಯ್ ಶಂಕರ್, ಚಿಕ್ಕಮೊಗ, ಸತೀಶ್ ಸದಸ್ಯರಾದ ವರುಣಾ ಕುಮಾರಿ, ಮೇಘನಾ ಮುಖಂಡರಾದ ಯೋಗೇಶ್, ನವೀನ್ ಕುಮಾರ್, ನಟರಾಜ್, ನಂದೀಶ್, ಬಸವೇಗೌಡ, ಮಾಯಣ್ಣ, ಬಸವರಾಜು ಅಲೂರು ಗ್ರಾಮಸ್ಥರು ಹಾಜರಿದ್ದರು .

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ