Wednesday, November 18, 2026

ಪ್ರಾಯೋಗಿಕ ಆವೃತ್ತಿ

ಪ್ರಭು ಚೌಹಾಣ್ ಗೆ ಭಗವಂತ ಖೂಬಾ ಕೊಲೆ ಬೆದರಿಕೆ| ಬಿಜೆಪಿ v\s ಬಿಜೆಪಿ ಕಾದಾಟ ಎಂದ ಕಾಂಗ್ರೆಸ್

ಬಿಜೆಪಿಯ ಮಾಜಿ ಸಚಿವ ಪ್ರಭು ಚೌಹಾಣ್ ಅವರನ್ನು ಬಿಜೆಪಿ ಸಂಸದ ಭಗವಂತ ಖೂಬಾ ಅವರು ಗುಂಡಿಕ್ಕಿ ಕೊಲೆ ಮಾಡಲು ಸಂಚು ರೂಪಿಸಿದ್ದಾರಂತೆ. ಬಿಜೆಪಿಯಲ್ಲಿ ಮಾಜಿ ಸಚಿವರೊಬ್ಬರ ಜೀವಕ್ಕೆ ರಕ್ಷಣೆ ಇಲ್ಲದಾಗಿದೆಯೇ? ಬಿಜೆಪಿ v\s ಬಿಜೆಪಿ ಕಾದಾಟವು ರಕ್ತಪಾತದ ಹಂತದವರೆಗೂ ಬಂದಿದೆಯೇ? ಸಂಸದರೊಬ್ಬರ ಮೇಲೆ ಇಂತಹ ಗಂಭೀರ ಆರೋಪ ಬಿಜೆಪಿಯವರೇ ಮಾಡಿರುವಾಗ ಬಿಜೆಪಿ ಪಕ್ಷ ಮೌನವಹಿಸಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“>

ಬಿಜೆಪಿಯ ಸಂಸದ ಭಗವಂತ್ ಖೂಬಾ ಬಿಜೆಪಿಯ ಮಾಜಿ ಸಚಿವ ಪ್ರಭು ಚೌಹಾಣ್ ಅವರನ್ನು ಕೊಲೆ ಮಾಡುವ ಸಂಚು ರೂಪಿಸಿದ ಆರೋಪವನ್ನು ಸ್ವತಃ ಪ್ರಭು ಚೌಹಾಣ್ ಮಾಡಿದ್ದಾರೆ, ಈ ಆರೋಪದ ಬಗ್ಗೆ ಸಂಸದರ ವಿರುದ್ಧ ನರೇಂದ್ರ ಮೋದಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವರೇ? ಬಿಜೆಪಿಯಲ್ಲಿ ಪರಿಶಿಷ್ಟ ಸಮುದಾಯದ ರಾಜಕಾರಿಣಿಗಳಿಗೆ ಜೀವ ಬೆದರಿಕೆ ಹಾಕಿ ಬ್ಲಾಕ್ಮೇಲ್ ಮಾಡಿ ಅದುಮಿ ಇಡಲಾಗಿದೆಯೇ? ಈ ಆರೋಪ ಕೇಳಿ ಬಂದಮೇಲೂ ಬಿಜೆಪಿ ಪ್ರಭು ಚೌಹಾಣ್ ನೆರವಿಗೆ ನಿಲ್ಲದಿರುವುದೇಕೆ? ಪರಿಶಿಷ್ಟ ಸಮುದಾಯದವರ ಬಗ್ಗೆ ಬಿಜೆಪಿಗೆ ಇಷ್ಟೊಂದು ತಾತ್ಸಾರವೇಕೆ? ಯಾವೊಬ್ಬ ಬಿಜೆಪಿ ನಾಯಕರೂ ಈ ಹತ್ಯಾ ಸಂಚಿನ ಬಗ್ಗೆ ಮಾತನಾಡದಿರುವುದೇಕೆ? ಬಿಜೆಪಿ ಉತ್ತರಿಸುವುದೇ? ಎಂದು ಕಾಂಗ್ರೆಸ್ ಕೆಣಕಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ