ಸಮಾನ ಮನಸ್ಕರೊಡಗೂಡಿ, ಸಮಾಜದ ಕಟ್ಟ ಕಡೆಯ ಜನರಿಗೆ ಹಾಗೂ ಆರ್ಥಿಕವಾಗಿ ಆಸಕ್ತ, ಅವಶ್ಯಕತೆ ಇರುವವರಿಗೆ ಕನಿಷ್ಠ ಸೌಲಭ್ಯ, ಸಹಕಾರ, ಸೇವೆ ನೀಡುವುದೇ ಲಯನ್ಸ್ ಸಂಸ್ಥೆಯ ಮೂಲ ಉದ್ದೇಶ ಎಂದು ವಲಯಾಧ್ಯಕ್ಷ ಲಯನ್ ಧನಂಜಯ ದರಸಗುಪ್ಪೆ ತಿಳಿಸಿದರು.
ಮಂಡ್ಯ ನಗರದ ಅರಕೇಶ್ವರನಗರ ,ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ “ವಾಕ್ ಮತ್ತು ಶ್ರವಣ ದೋಷವಿರುವವರಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ”ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂತರರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಜಿ ವತಿಯಿಂದ, ಮಂಡ್ಯದಲ್ಲಿರುವ ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ,ಒಂದು ತಿಂಗಳವರೆಗೆ ಜಿಲ್ಲೆ ಯಾದ್ಯಂತ ವಿವಿಧ ತಾಲೂಕುಗಳ ಗ್ರಾಮಗಳಲ್ಲಿ,ಸ್ಥಳಗಳಲ್ಲಿ ಹಮ್ಮಿಕೊಂಡಿರುವ “ವಾಕ್ ಮತ್ತು ಶ್ರವಣ ದೋಷವುಳ್ಳವರಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಯ “ಪ್ರಯೋಜನವನ್ನು ಅಗತ್ಯವಿರುವವರು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.

ಅವಶ್ಯಕತೆ ಕಂಡು ಬಂದಲ್ಲಿ ಇನ್ನೂ 15 ದಿನ ಹೆಚ್ಚುವರಿಯಾಗಿ ಶಿಬಿರ ಆಯೋಜಿಸಲು ಲಯನ್ಸ್ ಜಿಲ್ಲೆ 317-ಜಿ ನ ರಾಜ್ಯಪಾಲರಾದ ಲ. ಎನ್. ಕೃಷ್ಣೇಗೌಡ ಹಾಗೂ ಮಾಜಿ ರಾಜ್ಯಪಾಲರು ಹಾಗೂ ಜಿಲ್ಲೆಯ ಅಡ್ವೈಸರ್ ಆದ ಲ.ಕೆ. ದೇವೇಗೌಡರಲ್ಲಿ ಬೇಡಿಕೆ ಸಲ್ಲಿಸುವುದಾಗಿ ತಿಳಿಸಿದರು.
ಅಂತರರಾಷ್ಟ್ರೀಯ ಲಯನ್ಸ್ ಜಿಲ್ಲೆ 317-ಜಿ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಈಸ್ಟ್ ಪ್ರಾಜೆಕ್ಟ್, ಡಾ :ಎಸ್ ಆರ್ ಚಂದ್ರಶೇಖರ,ವಾಕ್ ಮತ್ತು ಶ್ರವಣ ಸಂಸ್ಥೆ ಬೆಂಗಳೂರು, ಮಂಡ್ಯದ ಲಯನ್ಸ್ ಸಂಸ್ಥೆಗಳಾದ, ಮಂಡ್ಯ ನಾಲ್ವಡಿ, ಮಂಡ್ಯ ಬೆಳಕು, ಮಂಡ್ಯ ಒಡನಾಡಿ, ಮಂಡ್ಯ ರೋಟರಿ ಸಂಸ್ಥೆ, ಕರ್ನಾಟಕ ಪಬ್ಲಿಕ್ ಸ್ಕೂಲ್, ಅರಕೇಶ್ವರ ನಗರ, ಹೋಟೆಲ್ ಅಪೂರ್ವ ದರ್ಶಿನಿ ರವರ ಸಹಯೋಗದಲ್ಲಿ, ಮಂಡ್ಯದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಅರಕೇಶ್ವರನಗರದಲ್ಲಿ, ‘ವಾಕ್ (ಮಾತು )ಶ್ರವಣ (ಕಿವಿ )ದೋಷವಿರುವವರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ’ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲೆ 317-ಜಿ ಯ,ಜಿ.ಇ.ಟಿ. ಸಂಯೋಜಕರು ಹಾಗೂ ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಲ. ಹನುಮಂತಯ್ಯ, ಕ್ವೆಸ್ಟ್ ಸದಸ್ಯರಾದ ಲ. ಚಿಕ್ಕಸ್ವಾಮಿ,ನಾಲ್ವಡಿ ಲಯನ್ಸ್ ಸಂಸ್ಥೆಯ ಲ. ಕೆ ಶಿವಲಿಂಗಯ್ಯ, ಲ. ಶಿವಲಿಂಗೇಗೌಡ, ಲ. ಟಿ ಆರ್ ಜಯಕುಮಾರ್,ಲ. ಲಿಂಗೇಗೌಡ (ಡಿಸಿ)ಬೆಳಕು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಲ. ಎಂ. ಸಿ ಭಾಸ್ಕರ್, ಕಾರ್ಯದರ್ಶಿ ಲ. ಎ. ಶೇಖರ್(ಡಿಸಿ )ಲ. ಖಜಾಂಚಿ ಕಾಂತರಾಜು, ಒಡನಾಡಿ ಸಂಸ್ಥೆಯ ಲ.ಅಧ್ಯಕ್ಷ ಏನ್. ಎಸ್. ಯೋಗೇಶ್, ಲ.ಪುಟ್ಟಸ್ವಾಮಿ ರೋಟರಿ ಸಂಸ್ಥೆಯ ಅಧ್ಯಕ್ಷೆ ರೋ.ಅನುಪಮ ಹಾಗೂ ಶಾಲಾ -ಕಾಲೇಜಿನ ಅಧ್ಯಾಪಕರು ,ಉಪನ್ಯಾಸರು ಉಪಸ್ಥಿತರಿದ್ದರು.




