Wednesday, November 18, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳ ಜೀವನ ರೂಪಿಸಲು ಶಿಕ್ಷಕರ ಮಹತ್ವದ ಪಾತ್ರ: ಮಹದೇವು

ವಿದ್ಯಾರ್ಥಿಗಳಿಗೆ ತಂದೆ ತಾಯಿ ಜನ್ಮ ನೀಡಿದರೆ, ಶಾಲಾ ಶಿಕ್ಷಕರು ಜೀವನ ಮಹತ್ವದ ಪಾತ್ರವಹಿಸುತ್ತಾರೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವು ಹೇಳಿದರು.

ಮಂಡ್ಯ ತಾಲೂಕಿನ ತಿಮ್ಮನ ಹೊಸೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳ ವೇದಿಕೆ ಆಯೋಜಿಸಿದ್ದ ಗುರುವಂದನೆ ಮತ್ತು ಭಾವ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜನ್ಮ ಎಷ್ಟು ಮುಖ್ಯವೋ ಜೀವನವೂ ಅಷ್ಟೇ ಮುಖ್ಯ, ಜೀವನದಲ್ಲಿ ಸುಖವಾಗಿ ಬಾಳಬೇಕು ಅಂದೆ ಗುಣಮಟ್ಟದ ಶಿಕ್ಷಣ ಅತ್ಯಗತ್ಯ, ಗುಣಮಟ್ಟದ ಶಿಕ್ಷಣ ನೀಡಿದ ಶಿಕ್ಷಕರನ್ನು ಗುರುವಂದನಾ ಮೂಲಕ ಅಭಿನಂದಿಸಿ ಧನ್ಯತೆಭಾವ ಪಡೆಯುತ್ತಿದ್ದೀರಿ ಎಂದು ನುಡಿದರು.

ವಿಶ್ವಜ್ಞಾನಿ ಡಾ.ಅಂಬೇಡ್ಕರ್ ಹೇಳಿದ್ದಾರೆ ಯಾವ ಗ್ರಾಮದಲ್ಲಿ ದೇವಾಲಯದ ಗಂಟೆಗಿಂತ ಶಾಲೆಯ ಗಂಟೆ ಹೆಚ್ಚು ಶಬ್ದ ಮಾಡುತ್ತದೋ ಅಂತ ಗ್ರಾಮ ಅಭಿವೃದ್ದಿಯಾಗುತ್ತದೆ ಎಂದು ಹೇಳಿರುವುದು ಈ ಗ್ರಾಮದಲ್ಲಿ ಸತ್ಯವಾಗುತ್ತಿದೆ, ವಿದ್ಯಾರ್ಥಿಗಳು ಒಳ್ಳಯ ಶಿಕ್ಷಣ ಪಡೆದಿದ್ದಾರೆ, ಉತ್ತಮ ಸಂಸ್ಕೃತಿ-ಸಂಸ್ಕಾರ ಪಡೆದಿದ್ದಾರೆ ಎಂದು ಹೇಳಿದರು.

ಒಂದು ಗ್ರಾಮ ಅಭಿವೃದ್ದಿ ಹೊಂದಲು ಯುವಕರು-ಯುವತಿಯರು ಉತ್ತಮ ಶಿಕ್ಷಣ ಪಡೆದಿರಬೇಕು, ಉದ್ಯೋಗದಲ್ಲಿರಬೇಕು, ಆದರ್ಶ ಜೀವನ ಕಟ್ಟಿಕೊಳ್ಳಬೇಕು, ಇಂತಹ ಸುಸಂದರ್ಭ ನಿಮ್ಮದಾಗಲಿ, ಉಜ್ವಲಭವಿಷ್ಯ ನಿಮ್ಮ ನಿಮ್ಮ ಕೈಯಲ್ಲಿ ರೂಪಿತಗೊಳ್ಳಲಿ ಎಂದು ನುಡಿದರು.

ಜಾಹೀರಾತು

ಹಿರಿಯ ವಿದ್ಯಾರ್ಥಿಗಳ ವೇದಿಕೆ ಗೌರವಾಧ್ಯಕ್ಷ ಟಿ.ಸಿ.ತಿಮ್ಮೇಗೌಡ, ಮಂಡ್ಯ ತಾಲೂಕಿನ ಗಡಿಭಾಗದ ಗ್ರಾಮ ತಿಮ್ಮನಹೊಸೂರಿನಲ್ಲಿ 1991ರಲ್ಲಿ ಪ್ರೌಢಶಾಲೆ ಆರಂಭಗೊಳ್ಳುತ್ತದೆ, 7 ಗ್ರಾಮಗಳ ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಸೇರಿಸಿ, ಶೈಕ್ಷಣಿಕ ಪ್ರಗತಿಗೆ ಮುಂದಾಗುತ್ತಾರೆ, ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸುತ್ತಾರೆ ಎಂದು ನುಡಿದರು.

ಇಲ್ಲಿಯವರೆಗೆ ಸುಮಾರು 1,300 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ, ಇಲ್ಲಿ ಶಿಕ್ಷಣ ಪಡೆದವರು ಈಗ ವಕೀಲರು, ಇಂಜಿನಿಯರ್, ವೈದ್ಯರು, ಉದ್ಯಮಿಗಳು, ಶಿಕ್ಷಕರಾಗಿರುವುದು ಹೆಮ್ಮೆ ತರುತ್ತದೆ, ನಮ್ಮ ಶ್ರಮ ಸಾರ್ಧಕವೆಸುಷ್ಟು ಸಾಧನೆ ಮಾಡುವ ದಿನಗಳು ಬರಲಿ ಎಂದು ಆಶಿಸಿದರು.

ಮುಖ್ಯ ಶಿಕ್ಷಕ ಯೋಗೇಶ್ ಹಿರಿಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಗ್ರಾಮದ ಮುಖಂಡರ ಸಹಕಾರದೊಂದಿಗೆ ಗಣ್ಯರನ್ನು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಾದಮೇಳ, ಜಾನಪದ ಪೂಜಾಕುಣಿತದೊಂದಿಗೆ ಅಲಂಕೃತ ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿ ವೇದಿಕೆಯತ್ತ ಕರತಂದಿರುವುದು ರೋಮಾಂಚನಗೊಳಿಸಿತು ಎಂದು ನುಡಿದರು.

ಭಾವ ಸಮ್ಮುಲನ ಕಾರ್ಯಕ್ರಮ ಆಯೋಜನೆಗೊಳ್ಳಲು ಎಲ್ಲರ ಶ್ರಮದಿಂದ ಯಶಸ್ಸು ಕಂಡಿದೆ, 1991ರಿಂದ 2023ರ ತನಕ್ಕೆ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸಂಪರ್ಕಿಸಿ, ಆಹ್ವಾನ ನೀಡಲು ಶ್ರಮಿಸಿದ ಎಲ್ಲರಿಗೂ ಧನ್ಯತೆ ತಿಳಿಸುತೇವೆ, ಇಂತಹ ಅಪರೂಪದ ಗುರುವಂಧನೆಗೆ ಸಾಕ್ಷೀಕರಿಸಿದ ಎಲ್ಲರಿಗೂ ನಮನ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಶಾಲೆ ಅಭಿವೃದ್ದಿಗೆ ಕೊಡುಗೆ ನೀಡಿದ ದಾನಿಗಳನ್ನು ಸ್ಮರಿಸಲಾಯಿತು, ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡಿದ್ದ ಎಲ್ಲಾ ಶಿಕ್ಷಕರನ್ನು ಮತ್ತು ಸೇವೆ ಸಲ್ಲಿಸುತ್ತಿರುವ ಶಿಕ್ಷಕವೃಂದವನ್ನು ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳು ಅಭಿನಂದಿಸಿ ಧನ್ಯತಾಭಾವದಿಂದ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ವೆಂಕಟೇಶ್, ಶಿಕ್ಷಣ ಇಲಾಖೆಯ ಬಿ.ಆರ್.ಸಿ.ನಾಗರಾಜು, ವಿಷಯ ಪರಿವೀಕ್ಷಕರಾದ ನಂಜರಾಜು, ಪುಟ್ಟರಾಜಯ್ಯ, ಉಮೇಶ್, ಹಿರಿಯ ವಿದ್ಯಾರ್ಥಿಗಳ ವೇದಿಕೆ ಗೌರವಾಧ್ಯಕ್ಷ ಚಲುವರಾಜ್, ಜಿಲ್ಲಾ ಸಹಕಾರ ಯೂನಿಯನ್ ಮಾಜಿ ನಿರ್ದೇಶಕ ಎಂ.ಟಿ.ನಾಗರಾಜು, ಹಿರಿಯ ವಿದ್ಯಾರ್ಥಿಗಳ ವೇದಿಕೆ ಗೌರವಾಧ್ಯಕ್ಷ ವಕೀಲ ಸುರೇಶ್, ನಿರ್ದೇಶಕರಾದ ಚಿಕ್ಕಸ್ವಾಮಿ, ಡಯಟ್ ಉಪನ್ಯಾನಸಕ ಸಬ್ಬನಹಳ್ಳಿ ಸಿದ್ದರಾಜು, ಮಂಚಲಿಂಗೇಗೌಡ, ಚೈತನ್ಯ, ಸತೀಶ್, ಕುಮಾರ್, ಗ್ರಾ.ಪಂ.ಸದಸ್ಯ ಆನಂದ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ