Thursday, November 19, 2026

ಪ್ರಾಯೋಗಿಕ ಆವೃತ್ತಿ

4 ವರ್ಷಗಳ ಪದವಿ ಕೈ ಬಿಡಲು ಸರ್ಕಾರದ ಚಿಂತನೆ: ಎಐಡಿಎಸ್ಓ ಸ್ವಾಗತ

ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಕೈ ಬಿಟ್ಟು ಹಳೆಯ ಪದ್ಧತಿಯನ್ನೇ ಮುಂದುವರಿಸುವ ರಾಜ್ಯ ಸರ್ಕಾರದ ಚಿಂತನೆಯನ್ನು ಸ್ವಾಗತಿಸಿ ಎಐಡಿಎಸ್ಓ ಮಂಡ್ಯ ಜಿಲ್ಲಾ ಸಂಚಾಲಕಿ ಚಂದ್ರಕಲಾ ಸ್ವಾಗತಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಎನ್‌ಈಪಿ ಹೇರಿಕೆಯ ಭಾಗವಾಗಿದ್ದ ನಾಲ್ಕು ವರ್ಷದ ಪದವಿ ಕೋರ್ಸ್ ನ್ನು ಕೈಬಿಟ್ಟು ಸಾಂಪ್ರದಾಯಿಕ 3 ವರ್ಷದ ಪದವಿಗೆ ಮರಳಲು ರಾಜ್ಯ ಸರ್ಕಾರವು ಚಿಂತನೆ ನಡೆಸುತ್ತಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರ ಮಾತುಗಳು ಕೂಡ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ನಿರ್ಧಾರವು ಜಾರಿಯಾದರೆ, ಇದು ರಾಜ್ಯದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಶಿಕ್ಷಣಪ್ರೇಮಿ ಜನತೆಯ ಹೋರಾಟಕ್ಕೆ ಸಂದಿರುವ ಜಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು

ನಾಲ್ಕು ವರ್ಷದ ಪದವಿಯಷ್ಟೇ, ಉನ್ನತ ಶಿಕ್ಷಣವು ಎದುರಿಸುತ್ತಿರುವ ಸಮಸ್ಯೆಯಲ್ಲ. ಪ್ರವೇಶ ಶುಲ್ಕ ಹೆಚ್ಚಳ, ಅಧ್ಯಾಪಕರ ಕೊರತೆ, ಹಾಸ್ಟೆಲ್ ಕೊರತೆ, ದೀರ್ಘ ವಿಳಂಬವಾಗುತ್ತಿರುವ ವಿದ್ಯಾರ್ಥಿ ವೇತನ ಸೇರಿದಂತೆ ಶೈಕ್ಷಣಿಕ ಕ್ಷೇತ್ರದ ಇತರ ಗಂಭೀರ ಸಮಸ್ಯೆಗಳೆಡೆಗೆ ಕೂಡ ಸರ್ಕಾರವು ಚಿಂತನೆ ನಡೆಸಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ತಜ್ಞರ ಅಭಿಪ್ರಾಯದೊಂದಿಗೆ ಮುಂದುವರಿಯಬೇಕು ಮತ್ತು ಪಕ್ಷಗಳ ರಾಜಕೀಯವನ್ನು ಇದರಿಂದ ದೂರವಿಟ್ಟು ಶಿಕ್ಷಣದ ಪ್ರಗತಿಗೆ ಪೂರಕವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಎಐಡಿಎಸ್ಓ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ