Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ರಾಜಕಾರಣದ ಮೆರಗನ್ನು ಹಾಳು ಮಾಡಬೇಡಿ – ಬೇಲೂರು ಸೋಮಶೇಖರ್

ಮಂಡ್ಯ ಜಿಲ್ಲಾ ರಾಜಕಾರಣಿಗಳಿಗೆ ರಾಷ್ಟ್ರಾದ್ಯಂತ ತನ್ನದೇ ಆದ ಹೆಸರಿದೆ ವೈಶಿಷ್ಟ್ಯವಿದೆ. ಪ್ರಸ್ತುತ ವೈಯಕ್ತಿಕ ದ್ವೇಷದಿಂದ ಸೋಲಿನ ಹತಾಶೆಯಿಂದ ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಅವರು ಮಂಡ್ಯ ಜಿಲ್ಲಾ ರಾಜಕಾರಣಿಗಳಿಗೆ ಇರುವ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಂಡ್ಯ ಪಿ. ಎಲ್. ಡಿ. ಬ್ಯಾಂಕ್ ಅಧ್ಯಕ್ಷ ಬೇಲೂರು ಸೋಮಶೇಖರ್ ಹೇಳಿದ್ದಾರೆ.

ಹೆಚ್. ಕೆ. ವೀರಣ್ಣ ಗೌಡ, ಸಾಹುಕಾರ್ ಚನ್ನಯ್ಯ, ಕೆ.ವಿ.ಶಂಕರಗೌಡ, ಎಸ್.ಎಂ.ಕೃಷ್ಣ, ಡಾ. ಎಂ. ಹೆಚ್. ಅಂಬರೀಶ್, ಜಿ.ಮಾದೇಗೌಡ, ಹೆಚ್. ಡಿ. ಚೌಡಯ್ಯ ಮೊದಲಾದ ರಾಜಕಾರಣಿಗಳ ಕೊಡುಗೆ ಕೊಟ್ಟ ಮಂಡ್ಯ ಜಿಲ್ಲೆಯ ಹೆಸರನ್ನು ಹಾಳು ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿರುವುದು ವಿಷಾದನೀಯ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಸ್ವಾಭಿಮಾನ, ಗೌರವ, ಅಭಿವೃದ್ಧಿ ಗಾಗಿ ಹೋರಾಡಬೇಕಾದ ಜನಪ್ರತಿನಿಧಿಗಳು, ನಕಲಿ ಪತ್ರ, ವ್ಯವಸ್ಥಿತ ಆತ್ಮಹತ್ಯೆ ತಂತ್ರ, ಹುಸಿ ಲಂಚ ಆರೋಪ ಇವುಗಳನ್ನು ಮುಂದಿಟ್ಟುಕೊಂಡು ಜಿಲ್ಲೆಯ ಜನಪ್ರತಿನಿಧಿಗಳಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿರುವುದು ಹಾಸ್ಯಾಸ್ಪದ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ವಿನಾಕಾರಣ ಯಾರನ್ನೋ ದೂಷಣೆ ಮಾಡುವ ಭರದಲ್ಲಿ ಜಿಲ್ಲೆಯ ರಾಜಕಾರಣದ ಮೆರಗನ್ನು ಹಾಳು ಮಾಡುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ