Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಿದ್ಯಾರ್ಥಿಗಳಿಗೆ 3 ದಿನಗಳ ತರಬೇತಿ ಶಿಬಿರ ಆರಂಭ

ಮಂಡ್ಯ: ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ಮತ್ತು ಮಂಡ್ಯ ಜಿಲ್ಲಾ ಶಾಖೆ ವತಿಯಿಂದ ಜೂನಿಯರ್‌ ರೆಡ್‌ಕ್ರಾಸ್‌ ಘಟಕದ ಅಡಿಯಲ್ಲಿ ಮೈಸೂರು ವಿಭಾಗದ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಮೂರು ದಿನದ ಶಿಬಿರ ಆರಂಭವಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಸದಸ್ಯ ಕೆ.ಟಿ.ಹನುಮಂತು ಮಾತನಾಡಿ, ಸೈನಿಕರು ಗಾಯಗೊಂಡಾಗ ಯುದ್ಧ ಭೂಮಿಯಲ್ಲಿ ರೆಡ್‌ಕ್ರಾಸ್‌ ಸಂಸ್ಥೆಯವರು ಚಿಕಿತ್ಸೆ ಮಾಡುತ್ತಿದ್ದರು. ಉತ್ತಮ ಉದ್ದೇಶದಿಂದಲೇ ಇದು ಆರಂಭವಾಯಿರು. ಕಾಲಕ್ರಮೇಣ ಅದು ಮುಂದುವರಿಯಿತು ಎಂದರು.

ಜಾಹೀರಾತು

ರೆಡ್‌ಕ್ರಾಸ್‌ ಸಂಸ್ಥೆಯಲ್ಲಿ ದೇಶದಲ್ಲಿ ರಾಷ್ಟ್ರಪತಿ ಅವರು ಅಧ್ಯಕ್ಷರು ಹಾಗೂ ರಾಜ್ಯದಲ್ಲಿ ರಾಜ್ಯಪಾಲರು ಅಧ್ಯಕ್ಷರಾಗಿರುತ್ತಾರೆ. ಜಿಲ್ಲೆಯ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ, ಈ ಸಂಸ್ಥೆಯು ಸೇವಾ ಮನೋಭಾವದಿಂದ ಬಂದಿರುತ್ತದೆ. ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಬೆಳೆಸುತ್ತದೆ. ಆರೋಗ್ಯ, ಚಿಕಿತ್ಸೆ ನೀಡುವುದು, ಪರಿಸರದ ಕಾಳಜಿ ಸೇರಿದಂತೆ ಸಮಾಜದಲ್ಲಿ ಉತ್ತಮ ಕೆಲಸಗಳಲ್ಲಿ ತೊಡಗುವದನ್ನು ಈ ಸಂಸ್ಥೆಯು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಕಾರ್ಯದರ್ಶಿ ಎಚ್‌.ಎಸ್‌.ಬಾಲಸುಬ್ರಹ್ಮಣ್ಯ, ಮೈಸೂರು ರೆಡ್‌ಕ್ರಾಸ್‌ ಸಂಸ್ಥೆಯ ರಾಜ್ಯ ಶಾಖೆಯ ಸದಸ್ಯ ಶರತ್‌, ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಸದಸ್ಯರಾದ ಕೆ.ಎಸ್‌.ಷಡಾಕ್ಷರಿ, ಜವರೇಗೌಡ, ಸಿದ್ದೇಗೌಡ, ಮಂಗಲ ಯೋಗೇಶ್‌ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ