Saturday, November 21, 2026

ಪ್ರಾಯೋಗಿಕ ಆವೃತ್ತಿ

ಚಂದ್ರಯಾನ-3 ಯಶಸ್ವಿ| ಚಂದ್ರನ ಮೇಲೆ ಕಾಲಿಟ್ಟ ವಿಕ್ರಮ್ ಲ್ಯಾಂಡರ್

ಕೋಟ್ಯಾಂತರ ಭಾರತೀಯರು ಸೇರಿದಂತೆ ಜಗತ್ತಿನ ಜನರು ಹಲವು ದಶಕಗಳಿಂದ ಕಾಯುತ್ತಿದ್ದ ಕನಸು ನನಸಾಗಿದೆ.

ಭಾರತೀಯರ ಕುತೂಹಲ ಮೂಡಿಸಿದ್ದ ಚಂದ್ರಯಾನ 3 ಯಶಸ್ವಿಯಾಗಿದ್ದು,ಇಸ್ರೋ ವಿಜ್ಞಾನಿಗಳ ತಂಡ ಕೊನೆಗೂ ಚಂದ್ರನ ಅಂಗಳದಲ್ಲಿ ವಿಕ್ರಮ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಹಲವು ದಶಕಗಳ ಕನಸನ್ನು ನನಸು ಮಾಡಿದೆ.

ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದ್ದು, ಈ ಮೂಲಕ ಬಾಹ್ಯಾಕಾಶ ವಲಯದಲ್ಲಿ ಭಾರತದ ಕೀರ್ತಿ ಮತ್ತಷ್ಟು ಹೆಚ್ಚಳವಾಗಿರುವುದು ಭಾರತೀಯರೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ.

ಅಮೆರಿಕ, ರಷ್ಯಾ, ಚೀನಾ ದೇಶಗಳು ಮಾತ್ರ ಚಂದ್ರನ ಮೇಲೆ ಪಾದಸ್ಪರ್ಶ ಮಾಡಿದ್ದು, ಈಗ ಭಾರತ ನಾಲ್ಕನೇ ದೇಶವಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಇಸ್ರೋ ಅಧ್ಯಕ್ಷ ಸೋಮನಾಥ್ ಹಾಗೂ ಅವರ ತಂಡದ ವಿಜ್ಞಾನಿಗಳ ಪರಿಶ್ರಮಕ್ಕೆ ಕೋಟ್ಯಾಂತರ ಭಾರತೀಯರು ಅಭಿನಂದನೆ ಸಲ್ಲಿಸಿದ್ದಾರೆ.

ಚಂದ್ರಯಾನ ಯಶಸ್ವಿಯಾಗುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಇಡೀ ದೇಶದಲ್ಲಿ ಜನರು ಚಂದ್ರಯಾನ ಯಶಸ್ವಿಗೆ ಸಂಭ್ರಮ ಪಟ್ಟಿದ್ದು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ಪ್ರಧಾನಿ ಅಭಿನಂದನೆ

ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡಿಂಗ್ ಆಗುವ ಕ್ಷಣಗಳನ್ನು ವೀಕ್ಷಣೆ ಮಾಡಿದರು. ಇಸ್ರೋ ವಿಜ್ಞಾನಿಗಳು ಇಂದು ಇತಿಹಾಸ ಸೃಷ್ಟಿಸಿದ್ದಾರೆ.ಅವರಿಗೆ ಅಭಿನಂದನೆಗಳು ಎಂದರು.

ನಾವು ಇಂದು ಚಂದ್ರನ ಮೇಲೆ ಕಾಲೂರಿದ್ದೇವೆ. ಈ ದಿನ ದೇಶದ ಪಾಲಿಗೆ ಅತಿ ಮಹತ್ವದ ದಿನ ಎಂದ ಪ್ರಧಾನಿ ಮೋದಿ, ನಮ್ಮ ಮುಂದಿನ ಗುರಿ ಸೂರ್ಯ ಹಾಗೂ ಶುಕ್ರ ಗ್ರಹ ಎಂದು ಘೋಷಿಸಿದರು. ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ರೂಪಿಸಿರುವ ಆದಿತ್ಯ ಯೋಜನೆ ಕೂಡಾ ಯಶಸ್ವಿಯಾಗಲಿ ಎಂದು ಹಾರೈಸಿದ ಪ್ರಧಾನಿ ಮೋದಿ, ಮುಂದಿನ ದಿನಗಳಲ್ಲಿ ಶುಕ್ರ ಗ್ರಹದತ್ತಲೂ ಇಸ್ರೋ ನೌಕೆ ರವಾನಿಸಲಿದೆ ಎಂದು ಹೇಳಿದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ