Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲಿ ಐರಾವತ-ಅಂಬಾರಿ ಬಸ್ಸುಗಳ ನಿಲುಗಡೆಗೆ ಸಚಿವರ ಸೂಚನೆ

ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಂಚರಿಸುವ ಐರಾವತ, ಅಂಬಾರಿ ಹಾಗೂ ಇತರೆ ತಡೆ ರಹಿತ ಬಸ್‌ಗಳನ್ನು ಮಂಡ್ಯ ನಗರದಲ್ಲಿ ನಿಲುಗಡೆ ಮಾಡಲು ಕ್ರಮವಹಿಸಬೇಕೆಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಕೆಎಸ್ಆರ್’ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ, ಅಂಬಾರಿ ಮತ್ತು ಇತರೆ ತಡೆ ರಹಿತ ಬಸ್‌ಗಳು ಮಂಡ್ಯ ನಗರಕ್ಕೆ ಪ್ರವೇಶಿಸದೇ, ಮಂಡ್ಯ ಹೊರಭಾಗ ರಾಷ್ಟ್ರೀಯ ಹೆದ್ದಾರಿ 275ರ ಬೈಪಾಸ್‌ನಲ್ಲಿ ಸಂಚರಿಸುತ್ತಿರುವುದರಿಂದ ಮಂಡ್ಯ ನಗರದ ಪ್ರಯಾಣಿಕರಿಗೆ ಈ ಬಸ್ ಗಳ ಸೌಲಭ್ಯ ಸಿಗುತ್ತಿಲ್ಲ.

ಅಲ್ಲದೆ ಮಂಡ್ಯ ನಗರದ ಕೆ.ಎಸ್‌.ಆರ್.ಟಿ.ಸಿ. ಬಸ್‌ ನಿಲ್ದಾಣದಲ್ಲಿ ಬಸ್‌ಗಳನ್ನು ನಿಲ್ಲಿಸದಿರುವುದರಿಂದ ಪ್ರಯಾಣಿಕರಿಗೆ ಬಹಳ ತೊಂದರೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಮಂಡ್ಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಐರಾವತ, ಅಂಬಾರಿ ಹಾಗೂ ಇತರ ತಡೆ ರಹಿತ ಬಸ್‌ಗಳನ್ನು ನಿಲ್ಲಿಸಲು ಕ್ರಮ ವಹಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ