Wednesday, November 18, 2026

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿಗೆ 7279 ಕ್ಯೂಸೆಕ್ ನೀರು| 100.96 ಅಡಿಗಿಳಿದ KRS ನೀರಿನ ಮಟ್ಟ

ತಮಿಳುನಾಡಿಗೆ 7279 ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನಲೆಯಲ್ಲಿ ಜಲಾಶಯದ ನೀರಿನ ಮಟ್ಟ 100.96 ಅಡಿಗಿಳಿದಿದೆ.

ಗುರುವಾರ ಬೆಳಿಗ್ಗೆ 8 ಗಂಟೆ ವೇಳೆಗೆ ನದಿ ಹಾಗೂ ನಾಲೆ ಸೇರಿದಂತೆ 7329 ಕ್ಯೂಸೆಕ್ ನೀರಿನ ಹೊರಹರಿವು ಹಾಗೂ 1610 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ.

124.80 ಗರಿಷ್ಠ ಮಟ್ಟದ ಜಲಾಶಯದಲ್ಲಿ ಕಳೆದ ಜು.3 ರಂದು 78.30 ಅಡಿಯಿದ್ದ ನೀರಿನ ಮಟ್ಟ ಕೊಡಗಿನಲ್ಲಿ ಉತ್ತಮ ಮಳೆಯಾಗಿ 113 ಅಡಿಗೇರಿತ್ತು. ಬಳಿಕ ನಾಲೆಗಿಂತ ನದಿಗೆ ಹೆಚ್ಚು ನೀರು ಹರಿಸಿದ ಪರಿಣಾಮ 13 ಅಡಿಯಷ್ಟು ನೀರಿನ ಮಟ್ಟ ಕುಸಿದಿದೆ.

ಕಳೆದ ವರ್ಷ ಇದೆ ದಿನ 123.92 ಅಡಿ ನೀರಿನ ಮಟ್ಟ, 25657 ಕ್ಯೂಸೆಕ್ ಒಳಹರಿವು ಹಾಗೂ 25468 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.

ಗರಿಷ್ಟ 49.452 ಟಿಎಂಸಿ ಜಲಾಶಯದಲ್ಲಿ ಸದ್ಯ 23.571 ಟಿಎಂಸಿ ನೀರಿದೆ. ಕಳೆದ ವರ್ಷ ಇದೇ ದಿನ 48.226 ಟಿಎಂಸಿ‌ ನೀರಿನ ಸಂಗ್ರಹವಿತ್ತು.

ಪ್ರಸ್ತುತ ಕೆಆರ್’ಎಸ್ ಜಲಾಶಯದಿಂದ ನೀರಿನ ಹೊರ ಹರಿವು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಕಾವೇರಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ