Saturday, November 21, 2026

ಪ್ರಾಯೋಗಿಕ ಆವೃತ್ತಿ

ಪುಟ್ಟ ಬಾಲಕಿಯ ಆಸೆ ಈಡೇರಿಸಿದ ತಮಿಳುನಾಡು ಸಿಎಂ ಸ್ಟಾಲಿನ್ !

ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಸಭೆಗೆ ಆಗಮಿಸಿದ್ದ ತಮಿಳುನಾಡು ಸಿಎಂ ಸ್ಟಾಲಿನ್, ತಮ್ಮನ್ನು ಭೇಟಿ ಮಾಡಬೇಕೆಂದು ಹಂಬಲಿಸಿದ್ದ ಪುಟ್ಟ ಶಾಲಾ ಬಾಲಕಿಯನ್ನು ಭೇಟಿ ಮಾಡಿ, ಮಾತುಕತೆ ನಡೆಸುವ ಮೂಲಕ ಔದಾರ್ಯ ಮರೆದಿದ್ದಾರೆ.

“>

ಪ್ರಸ್ತುತ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವು ಪುಟ್ಟ ಬಾಲಕಿ ಪ್ರನುಷ್ಕಾ ಮೇಲೆ ಅಗಾಧವಾದ ಪರಿಣಾಮ ಬೀರಿದ್ದು, ತನ್ನ ಅನಿಸಿಕೆಗಳನ್ನು ಆಕೆ, ಸ್ಟಾಲಿನ್ ಅವರೊಂದಿಗೆ ಹಂಚಿಕೊಂಡಿದ್ಧಾರೆ.

ಈ ಬಗ್ಗೆ ಸಾಮಾಜಿಕ X ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್ ಅವರು, ಕರುಣಾಮಯಿ ಹುಡುಗಿ ಪ್ರನುಷ್ಕಾ ನನ್ನನ್ನು ಭೇಟಿಯಾಗಬೇಕೆಂಬ ಆಸೆ ವ್ಯಕ್ತಪಡಿಸಿದ್ದಳು, ನಾನು ಅದನ್ನು ಪೂರೈಸಿದ್ದೇನೆ. ಮಣಿಪುರದಲ್ಲಿ ನಡೆದ ಹಿಂಸಾಚಾರ ಇಂತಹ ಶಾಲಾ ಬಾಲಕಿಯ ಮೇಲೂ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ನೋಡಿದರೆ, ನನಗೆ ನೋವಾಗುತ್ತದೆ. ಶಾಶ್ವತ ಶಾಂತಿ ಮತ್ತು ಸೌಹಾರ್ದತೆಗಾಗಿ ಕೆಲಸ ಮಾಡಲು ಅಧಿಕಾರದಲ್ಲಿರುವವರಿಗೆ ಇದು ಸಂಪೂರ್ಣ ಜ್ಞಾಪನೆಯಾಗಿದೆ ಎಂದು ತಿಳಿಸಿದ್ದಾರೆ. ಐಎಎಸ್ ಅಧಿಕಾರಿಯಾಗುವ ಪ್ರನುಷ್ಕಾ ಅವರ ಕನಸು ನನಸಾಗಲಿ ಎಂದು ಹಾರೈಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ