ಮಂಡ್ಯದ ಕಾವೇರಿ ನಗರದ ಆಕೃತಿ ಮಾಂಟೇಸ್ಸರಿ ಶಾಲೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ‘ಆಕೃತಿ ಕಲಾಕಾರ್’ ಎನ್ನುವ ಕಾರ್ಯಕ್ರಮದಡಿಯಲ್ಲಿ ಆಕೃತಿ ಮಾಂಟೇಸ್ಸರಿ ಶಾಲೆಯ ಮಕ್ಕಳಿಗಾಗಿ ಶ್ರೀಕೃಷ್ಣವೇಷ ಸ್ಪರ್ಧೆಯನ್ನು ಮಂಡ್ಯನಗರದ ಗಾಂಧೀಭವನದಲ್ಲಿ ಸೆ.6ರಂದು ಬೆಳಗ್ಗೆ 10 ಗಂಟೆ ಆಯೋಜಿಸಲಾಗಿದೆ.
ಸಂದೇಶ ಆಧರಿತ ವಿವಿಧ ವೇಷಭೂಷಣ ಸ್ಪರ್ಧೆ, ವಿಜ್ಞಾನಕ್ಕೆ ಸಂಬಂಧಿಸಿದಂತೆ ವಸ್ತು ಪ್ರದರ್ಶನ- ಆಕೃತಿ ಎಕ್ಸ್ಪೋ ಸೇರಿದಂತೆ ವಿವಿಧ ಸ್ಪರ್ಧೆಗಳು ಕೂಡ ಜರುಗಲಿವೆ. ಹಾಗಾಗಿ ಸಾರ್ವಜನಿಕರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.




