Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಗಮನ ಸೆಳೆದ ಮಹಿಳೆಯರ ಕೆಸರು ಗದ್ದೆ ಓಟದ ಸ್ಪರ್ಧೆ

ಮಂಡ್ಯ ತಾಲ್ಲೂಕು ಹೊಳಲು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್, ಮಂಡ್ಯ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ, ಹೊಳಲು ಸ್ಥಳೀಯ ಸಂಘ -ಸಂಸ್ಥೆಗಳ ಸಹಯೋಗದೊಂದಿಗೆ ವಲಯ ಮಟ್ಟದ ಮಹಿಳಾ ಕೆಸರುಗದ್ದೆ ಆಟೋಟ ಸ್ಪರ್ಧೆ ನಡೆಯಿತು.

ಕೆಸರುಗದ್ದೆ ಓಟದಲ್ಲಿ ಭಾಗವಹಿಸಿದ್ದ ಯುವತಿಯರು, ಮಹಿಳೆಯರು ನಾ ಮುಂದು, ತಾ ಮುಂದು ಎಂದು ಓಡುತ್ತಾ ತಮ್ಮ ಗುರಿ ಮುಟ್ಟಲು ಹರಸಾಹಸಪಟ್ಟರು. ಓಡುವ ರಭಸದಲ್ಲಿ ಎದ್ದು ಬಿದ್ದು ಕೆಸರು ಮೆತ್ತಿಸಿಕೊಂಡರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪತ್ಯೇಕ ಎರಡು ತಂಡಗಳಾಗಿ ಮಹಿಳೆಯರು ಪಾಲ್ಗೊಂಡು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಒಟ್ಟಾರೆ ಈ ಸ್ಪರ್ಧೆಗಳು ನೋಡುಗರಿಗೆ ಮನೋರಂಜನೆ ನೀಡಿದವು ಸ್ಪರ್ಧೆ ವೀಕ್ಷಣೆಗೆಂದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ಕಾರ್ಯಕ್ರಮವನ್ನು ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಹೆಚ್.ಎಲ್.ಶಿವಣ್ಣ ಉದ್ಘಾಟಿಸಿ ಮಾತನಾಡಿ, ಸ್ವಸಹಾಯ ಸಂಘಗಳ ಸಾಲದ ಜೊತೆಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಇದರ ಜೊತೆಗೆ ಭತ್ತದ ನಾಟಿ, ಮದ್ಯವರ್ಜನ ಶಿಬಿರ ಹಾಗೂ ಸಮಾಜದಲ್ಲಿ ಬಡವರಿಗೆ, ಶೋಷಿತ ವರ್ಗದವರಿಗೆ ಅನುಕೂಲವಾಗಲೆಂದು ಹಲವಾರು ಕಾರ್ಯಕ್ರಮಗಳನ್ನು ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಹೆಚ್.ಬಿ.ರಾಮು ಮಾತನಾಡಿ, ಸರ್ಕಾರ ಮಾಡದಂತಹ ಕೆಲಸಗಳನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ. ಜನಪರ ಕಾರ್ಯಕ್ರಮಗಳು, ಶೌಚಾಲಯ, ಗ್ರಾಮದ ದೇವಸ್ಥಾನಗಳಿಗೆ, ಸಮುದಾಯ ಭವನಗಳ ಅಭಿವೃದ್ಧಿಗೆ ಆರ್ಥಿಕ ನೆರವನ್ನು ನೀಡುತ್ತಾ ಬಂದಿದೆ ಎಂದರು.

ರೈತಸಂಘದ ಮಂಡ್ಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ಶಂಕರ್ ಕೆಸರುಗದ್ದೆ ಆಟೋಟ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ಮಹಿಳೆಯರು ಸದೃಢರಾಗಿ, ಆರೋಗ್ಯವಂತರಾಗಿರಬೇಕಾದರೆ, ಇಂತಹ ಗ್ರಾಮೀಣ ಸ್ಪರ್ಧೆಗಳು ಬಹುಮುಖ್ಯ. ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು.

ಗ್ರಾ.ಪಂ. ಸದಸ್ಯ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷೆ ಎಂ.ಕೆ.ಅರ್ಪಿತಾ ಶಿವಲಿಂಗಯ್ಯ, ಮಾಜಿ ಅಧ್ಯಕ್ಷ ಹೆಚ್.ಡಿ.ರವಿ, ಉಪಾಧ್ಯಕ್ಷ ಜಯಪ್ರಕಾಶ್ (ಗೋಪಿ) ಮಾಜಿ ಉಪಾಧ್ಯಕ್ಷರಾದ ಪಲ್ಲವಿ, ರಮ್ಯ, ರಶ್ಮಿ ವಿಜಯಕುಮಾರ್, ಸೊಸೈಟಿ ಅಧ್ಯಕ್ಷ ನಿಂಗೇಗೌಡ, ಸಚ್ಚಿದಾನಂದ, ಕುಮಾರ್, ಒಕ್ಕೂಟದ ಅಧ್ಯಕ್ಷೆ ಲಿಂಗರಾಜಮ್ಮ, ಸದಸ್ಯೆ ವಿನುತ, ಗ್ರಾಮದ ಯುವಮುಖಂಡ ಸಂತೋಷ್, ಶಿವಕುಮಾರ್, ಗ್ರಾಮದ ಆಡಳಿತಾಧಿಕಾರಿ ಗುಣಶೇಖರ್, ವೈದ್ಯಾಧಿಕಾರಿ ದುರ್ಗಾಂಭ, ಜನಜಾಗೃತಿ ಸದಸ್ಯೆ ಶಂಕರ್ ಪೂಜಾರಿ, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶ್ವೇತ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಹೊಳಲು ಸಂಘ ಸಂಸ್ಥೆಯ ಪದಾಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ