Saturday, November 21, 2026

ಪ್ರಾಯೋಗಿಕ ಆವೃತ್ತಿ

ದ್ವೇಷ ಭಾಷಣದಿಂದ ಕುಖ್ಯಾತಿ ಪಡೆದಿದ್ದ ಚೈತ್ರಾ ಕುಂದಾಪುರ ಬಂಧನ

ಕೋಮು ಪ್ರಚೋದನೆ ಮತ್ತು ದ್ವೇಷ ಭಾಷಣದಿಂದಲೇ ಕರಾವಳಿಯಲ್ಲಿ ಕುಖ್ಯಾತಿ ಪಡೆದಿರುವ ಚೈತ್ರಾ ಕುಂದಾಪುರ ಅವರನ್ನು ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಂದಾಪುರ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬಾತನಿಗೆ ಬೈಂದೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಹಣ ಪಡೆದು, ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆ ಪ್ರಕರಣದಲ್ಲಿ ಆಕೆಯನ್ನೂ, ಆಕೆಯ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ತನಗೆ ಚೈತ್ರಾ ಕುಂದಾಪುರ ಮತ್ತು ಸಹಚರರು ನಾಲ್ಕು ಕೋಟಿ ರೂ. ವಂಚಿಸಿದ್ದಾರೆ ಎಂದು ಗೋವಿಂದ ಬಾಬು ಬರೆದಿದ್ದ ಪತ್ರವೊಂದು ಕಳೆದ ಕೆಲವು ತಿಂಗಳಿಂದ ವೈರಲ್ ಆಗಿತ್ತು. ಅಲ್ಲದೆ, ಚೈತ್ರಾ ಅವರು ವಿಶ್ವಾನಾಥ್‌ ಜೀ ಎಂಬಾತನ ಬಗ್ಗೆ ಮಾತನಾಡಿರುವ ಫೋನ್‌ ರೆಕಾರ್ಡಿಂಗ್‌ ಕೂಡ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಉದ್ಯಮಿಯಿಂದ ಒಟ್ಟು 7 ಕೋಟಿ ರೂ.ಗಳನ್ನು ಮೂರು ಹಂತದಲ್ಲಿ ಚೈತ್ರಾ ಮತ್ತು ಆಕೆಯ ಟೀಮ್ ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ