Friday, November 20, 2026

ಪ್ರಾಯೋಗಿಕ ಆವೃತ್ತಿ

ಮಕ್ಕಳಿಗೆ ಎಳೆಯ ವಯಸ್ಸಿನಲ್ಲೇ ಕನಸುಗಳನ್ನು ಬಿತ್ತಿ- ರಾಮು

ಭವಿಷ್ಯದಲ್ಲಿ ಇಂಜಿನಿಯರ್ ಆಗುವಂತಹ ಕನಸನ್ನು ಎಳೆಯ ವಯಸ್ಸಿನಲ್ಲೇ ಮಕ್ಕಳಿಗೆ ಬಿತ್ತುವಂತಹ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ. ಅದಕ್ಕಾಗಿ ಮೊದಲು ಶಿಕ್ಷಕರು ತರಬೇತಿ ಪಡೆಯುವುದು ಅಗತ್ಯ ಎಂದು ಡಯಟ್‌ನ ಉಪ ಪ್ರಾಂಶುಪಾಲ ಎನ್.ಎಂ.ರಾಮು ಸಲಹೆ ನೀಡಿದರು.

ಅಮೆರಿಕನ್ ಇಂಡಿಯ ಫೌಂಡೇಷನ್, ಅಮೆಜಾನ್ ಫ್ಯೂಚರ್ ಇಂಜಿನಿಯರ್ ಸಂಸ್ಥೆಗಳ ವತಿಯಿಂದ ಮಂಡ್ಯದ ಡಯಟ್‌ನ ಸಭಾಂಗಣದಲ್ಲಿ ನಡೆದ ಮುಖ್ಯೋಪಾಧ್ಯಾಯರ ಸಮಾಲೋಚನಾ ಸಭೆ ಹಾಗೂ ಶಿಕ್ಷಕರ ತರಬೇತಿ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 100 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ 60 ಪ್ರೌಢ ಮತ್ತು 40 ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಎಲ್ಲ ಶಾಲೆಗಳಿಗೂ ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳ ಮೂಲಕ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಡಿಜಿಟಲ್ ಕಲಿಕೆಯಲ್ಲಿ ಕೇವಲ ಕಂಪ್ಯೂಟರ್ ಶಿಕ್ಷಕರು ಬರುತ್ತಾರೆ ಅವರು ಮಕ್ಕಳಿಗೆ ಪಾಠ ಹೇಳಿ ಕೊಡುತ್ತಾರೆ ಎಂಬ ಮನೋಭಾವನ್ನು ಹೋಗಲಾಡಿಸುವುದು. ಸಾಂಪ್ರಾದಾಯಿಕ ಬೋಧನಾ ವ್ಯವಸ್ಥೆ ಜೊತೆಗೆ ಟ್ಯಾಬ್ ಬಳಕೆ, ತಾಂತ್ರಿಕತೆಯಲ್ಲಿ ಹಿಂದೆ ಉಳಿದಿದ್ದರೆ ಅಂತಹ ಶಿಕ್ಷಕರಿಗೂ ಡಿಜಿಟಲ್ ತರಬೇತಿ ನೀಡಿ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವ ಕೆಲಸಗಳನ್ನು ಎನ್‌ಜಿಓ ಸಂಸ್ಥೆಗಳು ಮಾಡುತ್ತಿವೆ ಎಂದು ಹೇಳಿದರು.

ಅಮೆರಿಕನ್ ಇಂಡಿಯಾ ಫೌಂಡೇಷನ್ ಬೆಂಗಳೂರು ಶಾಖೆಯ ಮುಖ್ಯಸ್ಥ ರಾಜಗುರು ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಯೋಜಕ ಮಂಜುನಾಥ, ಕ್ಲಸ್ಟರ್ ಸಂಯೋಜಕ ಅಮಿತ್‌ಕುಮಾರ್, ಸಂಯೋಜಕರಾದ ವಿಶಾಲಾಕ್ಷಿ, ಕೆ.ರಾಗಿಣಿ, ಬಿಂದಿಯಾ ಎಸ್. ವಿನಾಯಕ, ಕೆ.ವಿ. ವಿಕಾಸ್, ಎಚ್.ಟಿ. ಅಭಿಷೇಕ್, ಸುನಿಲ್‌ಕುಮಾರ್, ದೇವರಾಜು ಸೇರಿದಂತೆ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ