ಮಳವಳ್ಳಿ ತಾಲ್ಲೂಕಿನ ನಡಕಲುಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಂಜೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಗೊಂದಲ ಉಂಟಾಯಿತು. 2022-2023 ನೇ ಸಾಲಿನ ಆಯವ್ಯಯ ವರದಿಯನ್ನು ಜಮಾ ನಷ್ಟ, ಆಸ್ತಿ ವಿವರವನ್ನು ಕಾರ್ಯದರ್ಶಿ ರಾಜಮ್ಮ ಓದಿದರು.

ಸಂಘದ ಮಾಜಿ ಅಧ್ಯಕ್ಷ ಲಿಂಗರಾಜು ಮಾತನಾಡಿ, ನಮ್ಮ ಕೃಷಿ ಪತ್ತಿನ ಸಹಕಾರದಲ್ಲಿ 2021 -22ನೇ ಸಾಲಿನಲ್ಲಿ ಸರಿಸುಮಾರು 11 ಲಕ್ಷ 11 ಸಾವಿರ ಲಾಭದಲ್ಲಿದ್ದು, ಕೆಲವು ನಿರ್ದೇಶಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಹಕಾರ ಸಂಘ ಸೂಪರ್ ಸೀಡ್ ಆಗಿದ್ದು ನಂತರ ಕಾರ್ಯದರ್ಶಿ ರಾಜಮ್ಮ ಅವರು ಹಣ ದುರುಪಯೋಗ ಮಾಡಿದ್ದಾರೆ. ಕಾರ್ಯದರ್ಶಿ ರಾಜಮ್ಮ ರವರ ಮಾಡಿರುವ ಅವ್ಯವಹಾರದ ಸಹಕಾರ ಸಂಘಗಳ ನಿಬಂಧಕರು ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಬೇಕು ಸಭೆಯಲ್ಲಿ ಒತ್ತಾಯಿಸಿದರು
ಎಂಡಿಸಿಸಿ ಬ್ಯಾಂಕ್ ವಿಶೇಷ ಅಧಿಕಾರಿ ಎಂ ಎಸ್ ಮಂಜು, ವೃತ್ತ ಮೇಲ್ವಿಚಾರಕರಾದ ಬಸವರಾಜು, ಉಮೇಶ್ ಹಾಜರಿದ್ದರು.




