Thursday, November 19, 2026

ಪ್ರಾಯೋಗಿಕ ಆವೃತ್ತಿ

ವಿಶ್ವಜ್ಞಾನಿ ಸಹಕಾರ ಸಂಘದಲ್ಲಿ ಅವ್ಯವಹಾರ- ತಾಳಶಾಸನ ಮೋಹನ್ ಬಂಧನಕ್ಕೆ ಆಗ್ರಹ

ವಿಶ್ವಜ್ಞಾನಿ ನೌಕರರ ಅಭಿವೃದ್ಧಿ ಸಹಕಾರ ಸಂಘದಲ್ಲಿ ಸಂಘದ ಮಾಜಿ ಅಧ್ಯಕ್ಷ ತಾಳಶಾಸನ ಮೋಹನ್ ಸೇರಿದಂತೆ ಆತನ ಕುಟುಂಬದವರು ಹಾಗೂ ಸಂಬಂಧಿಕರು 2 ಕೋಟಿ ರೂ. ಹೆಚ್ಚಿನ ಅವ್ಯವಹಾರವನ್ನು ನಡೆಸಿದ್ದಾರೆಂದು ಆರೋಪಿಸಿರುವ ಸಂಘದ ಹಾಲಿ ಅಧ್ಯಕ್ಷ ನಂಜುಂಡಯ್ಯ ಅವರು, ಕೂಡಲೇ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳಶಾಸನ ಮೋಹನ್ ಹಾಗೂ ಆತನ ತಂದೆ ಆತನ ತಂದೆ ಸುರೇಂದ್ರ, ಪತ್ನಿ ಪವಿತ್ರ, ತಂಗಿ ಪ್ರತಿಮಾ, ಭಾವಮೈದ ಮಧು ಹಾಗೂ ಕೆಎಸ್‌ಆರ್‌ಟಿಸಿ ನೌಕರ ಎಂ.ಎ.ಶ್ರೀಧರ್ ಅವರು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಕೂಡಲೇ ಇವರನ್ನು ಪೊಲೀಸರು ಬಂಧಿಸಿ ವಿಚಾರಣೆ ಒಳಪಡಿಸಬೇಕೆಂದು ಆಗ್ರಹಿಸಿದರು.

ದೂರು ದಾಖಲಿಸಲಿ ಎರಡು ತಿಂಗಳಾದರೂ ಸಹ ಪೊಲೀಸರು, ತಪ್ಪಿತಸ್ಥರನ್ನು ಬಂಧಿಸುತ್ತಿಲ್ಲ. ಮಾಜಿ ಅಧ್ಯಕ್ಷರು ತಮ್ಮ ರಾಜಕೀಯ ಪ್ರಭಾವ ಮತ್ತು ಹಣಬಲದಿಂದ ತಮ್ಮನ್ನು ಬಂಧಿಸದಂತೆ ಪ್ರಭಾವ ಬೀರಿರುವ ಸಾಧ್ಯತೆಯಿದೆ. ಸಹಕಾರ ಸಂಘಕ್ಕೆ ಯಾವುದೇ ಸಂಬಂಧವಿಲ್ಲದ, ಷೇರುದಾರ ಅಥವಾ ನಿರ್ದೇಶಕರಲ್ಲದ ತಮ್ಮ ತಂದೆ ಹೆಸರಿಗೆ ₹1,26,500 ಲಕ್ಷ ರೂ. ಮೌಲ್ಯದ ಚೆಕ್ ನೀಡಿದ್ದಾರೆಂದು ಆರೋಪಿಸಿದರು.

ಅಷ್ಟೆ ಅಲ್ಲದೇ ತನ್ನ ತಂಗಿ ಪ್ರತಿಮ ಹೆಸರಿಗೆ ₹1.35 ಲಕ್ಷ, ರಮ್ಯಾ ಹೆಸರಿಗೆ ₹ 2 ಲಕ್ಷ, ಭಾಮೈದ ಮಧು ಹೆಸರಿಗೆ ₹ 7,43 ಲಕ್ಷ, ಸ್ವತಃ ತನ್ನ ಹೆಸರಿಗೆ ₹ 2,13 ಲಕ್ಷ, ಪತ್ನಿ ಪವಿತ್ರ ಹೆಸರಿಗೆ ₹ 3 ಲಕ್ಷ ಹಾಗೂ ಎಂ.ಎ.ಶ್ರೀಧರ ಹೆಸರಿಗೆ ₹25 ಲಕ್ಷಗಳ ಮಾಡಿದ್ದು, ಸಂಘದ ಹಣವನ್ನು ಕುಟುಂಬದವರಿಗೆ ಹಾಗೂ ಸಂಬಂಧಿಕರಿಗೆ ವರ್ಗಾವಣೆ ಮಾಡಿಕೊಂಡು ಸದಸ್ಯರನ್ನು ವಂಚಿಸಿದ್ದಾರೆ. ಆದ್ದರಿಂದ ಈ ಸಂಬಂಧಿಸಿದ್ದಂತೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದರು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಕೆ.ಎಲ್.ಧೀರೇಂದ್ರಕುಮಾರ್, ಸಿ.ರಮೇಶ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ