Thursday, November 19, 2026

ಪ್ರಾಯೋಗಿಕ ಆವೃತ್ತಿ

ಮೋದಿ ಪ್ರಕಾರ ಭ್ರಷ್ಟಾಚಾರ ಮುಚ್ಚಿಹಾಕುವುದೇ ಭ್ರಷ್ಟಾಚಾರ ಮುಕ್ತ ಆಡಳಿತ: ಕಾಂಗ್ರೆಸ್ ವ್ಯಂಗ್ಯ

”ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ” ಎಂದವರು ಈಗ “ತಿಂದಿದ್ದನ್ನು ಹೇಳಿದವರನ್ನು ಬಿಡುವುದಿಲ್ಲ” ಎಂದು ಬದಲಿಸಿಕೊಂಡಿದ್ದಾರೆಯೇ  ? ಎಂದು ಬಿಜೆಪಿ ನಡೆಯನ್ನು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ”ಮೋದಿ ಪ್ರಕಾರ ಭ್ರಷ್ಟಾಚಾರವನ್ನು ಮುಚ್ಚಿಹಾಕುವುದನ್ನು ಭ್ರಷ್ಟಾಚಾರ ಮುಕ್ತ ಆಡಳಿತ ಎನ್ನಲಾಗುತ್ತದೆ!” ಎಂದು ಟೀಕಿಸಿದೆ.

“>

 

ಭಾರತ್ ಮಾಲಾ, ಆಯುಷ್ಮಾನ್ ಭಾರತ್ ಹಾಗೂ ಇನ್ನಿತರ ಹಲವು ಯೋಜನೆಗಳಲ್ಲಿ ನಡೆದ ಬೃಹತ್ ಭ್ರಷ್ಟಾಚಾರವನ್ನು ಹೊರಗೆಡವಿದ ಇಬ್ಬರು ಸಿಎಜಿ ಅಧಿಕಾರಿಗಳನ್ನು ಪ್ರಧಾನಿ ಮೋದಿ ಎತ್ತಂಗಡಿ ಮಾಡಿಸಿದ್ದಾರೆ” ಎಂದು ಕಿಡಿಕಾರಿದೆ.

”ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ” ಎಂದವರು ಈಗ ”ತಿಂದಿದ್ದನ್ನು ಹೇಳಿದವರನ್ನು ಬಿಡುವುದಿಲ್ಲ” ಎಂದು ಬದಲಿಸಲಾಗಿದೆಯೇ?” ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಭ್ರಷ್ಟಾಚಾರ ಬಯಲಿಗೆಳೆದ ಸಿಎಜಿ ವರ್ಗಾವಣೆ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ