ಮಳವಳ್ಳಿ ಶಾಂತಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ವಾಣಿಜ್ಯ ಮತ್ತು ಬಿ. ಬಿ. ಎಂ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಮತ್ತು ಪ್ರಥಮ ವರ್ಷದ ವಾಣಿಜ್ಯ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.
ಶಾಂತಿ ಕಾಲೇಜಿನ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಚಂದ್ರಿಕಾ ಉದ್ಘಾಟನೆ ಮಾಡಿದರು. ವಾಣಿಜ್ಯ ವಿದ್ಯಾರ್ಥಿಗಳು ಪ್ರಥಮ ವರ್ಷದಿಂದಲೇ ಚಾರ್ಟೆಡ್ ಅಕೌಂಟ್ ಬಗ್ಗೆ ಅಭ್ಯಾಸ ಮಾಡಿದರೆ, ಭವಿಷ್ಯದಲ್ಲಿ ಉತ್ತಮ ಕೆಲಸಗಳು ದೊರಕಲು ಸಹಕಾರಿಯಾಗುತ್ತದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಗಳು ಭಾಗವಹಿಸಿ ಉತ್ತಮ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಬೇಕೆಂದು ಆಶಿಸಿದರು.
ನಂತರ ಹಿರಿಯ ವಿದ್ಯಾರ್ಥಿಗಳಾದ ಟಿ.ಎಮ್ ಪ್ರಕಾಶ್ ಮತ್ತು ಪೂಜಾ ಮಾತನಾಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಬಂಧದ ಬಗ್ಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು
ಕಾರ್ಯದರ್ಶಿಗಳಾದ ತಿಮೇಗೌಡ. ಕೆಂಪಯ್ಯ. ಪ್ರಾಶುoಪಾಲರಾದ ವೇದಮೂರ್ತಿ, ಶಿವಪ್ಪ, ಉಪನ್ಯಾಸಕ ಜಗನ್ನಾಥ್ ಸೇರಿದಂತೆ ಅಧ್ಯಾಪಕರು ಹಾಜರಿದ್ದರು.




